ದರ್ಶನ್‌ ಗೆ ಆದಾಯ ತೆರಿಗೆ ಇಲಾಖೆ ಶಾಕ್‌

ಜೈಲಿನಲ್ಲಿರುವ ದರ್ಶನ್‌ ಗೆ ಆದಾಯ ತೆರಿಗೆ ಇಲಾಖೆ ಶಾಕ್‌ ನೀಡಿದೆ. ದರ್ಶನ್ ನಿವಾಸದಲ್ಲಿ ಪತ್ತೆಯಾದ 82 ಲಕ್ಷ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಇರಿಸಲು 57ನೇ ಸಿಸಿಎಚ್ ಕೋರ್ಟ್ ಆದೇಶಿಸಿದೆ.

ತನಿಖೆ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು  ದರ್ಶನ್ ಮತ್ತು ಪ್ರದೋಷ್ ಮನೆಗಳಿಂದ ಹಣ ವಶಪಡಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದರು. ಐಟಿ ಇಲಾಖೆ ತನಿಖೆ ನಡೆಸಿದ್ದರೂ ಇನ್ನೂ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದರ್ಶನ್ ಹಣ ವಾಪಸ್ ನೀಡುವಂತೆ ಮನವಿ ಸಲ್ಲಿಸಿದ್ದರು.

ದರ್ಶನ್ ಅರ್ಜಿಗೆ ಐಟಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತು. ಅವರು ಹಣದ ಬಗ್ಗೆ ಸ್ಪಷ್ಟ ದಾಖಲೆಗಳನ್ನು ನೀಡಿಲ್ಲವೆಂದು ತಿಳಿಸಿತು. ವಾದ–ಪ್ರತಿವಾದ ವಿಚಾರಣೆ ನಂತರ, ಕೋರ್ಟ್ 82 ಲಕ್ಷ ರೂ. ಹಣವನ್ನು ಐಟಿ ವಿಭಾಗದಲ್ಲೇ ಉಳಿಸಿ ತನಿಖೆಯನ್ನು ಮುಂದುವರೆಸುವಂತೆ ಆದೇಶ ನೀಡಿದೆ.

ಹಣ ದರ್ಶನ್ ಮನೆಗೆ ಹೇಗೆ ಬಂತು ಎಂಬುದಕ್ಕೆ ದರ್ಶನ್‌ ಅವರ ಪರ ವಕೀಲರು,  “ದರ್ಶನ್ ಅವರು ಮೋಹನ್ ರಾಜ್‌ಗೆ ಸಾಲವಾಗಿ ಹಣ ನೀಡಿದ್ದರು. ನಂತರ ಮೋಹನ್ ರಾಜ್  ಹಣವನ್ನು ಮರುಪಾವತಿ ಮಾಡಿದ್ದಾರೆ” ಎಂದು ವಾದಿಸಿದರು.

ಈ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ದರ್ಶನ್ ಸಲ್ಲಿಸಿಲ್ಲ.  ಇದು ವಂಚನಾಸಂಬಂಧಿ ಹಣ ಎಂದು  ಆದಾಯ ತೆರಿಗೆ ಇಲಾಖೆ ವಾದಿಸಿತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!