ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬ: ಟೈಟಲ್ ಬಿಡುಗಡೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು 59 ನೇ ವರ್ಷಕ್ಕೆ ಕಾಲಿಟ್ಟಿದ್ದು ಮುಂದಿನ ದಿನಗಳಲ್ಲಿ ಶಿವಣ್ಣ ಅವರ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.

ಭಜರಂಗಿ 2, ಹರ್ಷ ನಿರ್ದೇಶನದ ವೇದ, ಇನ್ನೂ ಹೆಸರಿಡದ ವಿಜಯ್ ಮಿಲ್ಟನ್ ನಿರ್ದೇಶನದ 123 ನೇ ಚಿತ್ರ, ರಿಷಬ್ ಶೆಟ್ಟಿ ಅವರೊಂದಿಗೆ 126 ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಹೊಸ ಬಗೆಯ ಚಿತ್ರಗಳಲ್ಲಿ ನಟಿಸುತ್ತಿರುವ ಶಿವರಾಜ್ ಕುಮಾರ್ ಅವರು ಈ ಮೂಲಕ ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿದ್ದಾರೆ.

ಕರೋನ ಮೊದಲ ಅಲೆಯ ಕಾರಣದಿಂದ ಶಿವರಾಜ್ ಕುಮಾರ್ ಕಳೆದ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಈ ವರ್ಷವೂ ಕರೋನ ಎರಡನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರು ಈ ಬಾರಿಯೂ ಹುಟ್ಟುಹಬ್ಬ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಶಿವರಾಜ್ ಕುಮಾರ್ ಸೂಚನೆ ಮೇರೆಗೆ ಅಭಿಮಾನಿಗಳು ಸಮಾಜ ಸೇವೆಯ ಮೂಲಕ ಸರಳವಾಗಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ವಿಜಯ್ ಮಿಲ್ಟನ್ ನಿರ್ದೇಶನದ 123 ನೇ ಚಿತ್ರದ ಟೈಟಲ್ ಬಿಡುಗಡೆ ಆಗಲಿದೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ.

ಶಿವರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮುಂಬರುವ ಕೆಲವೊಂದು ಚಿತ್ರಗಳ ಪೋಸ್ಟರ್, ಟೀಸರ್ ಗಳು ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
1986ರಲ್ಲಿ ” ಆನಂದ್ ” ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಶಿವಣ್ಣ, ಕಮರ್ಷಿಯಲ್ ಚಿತ್ರಗಳಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. ಹೊಸ ಪಾತ್ರಗಳನ್ನು ಸದಾ ಸ್ವೀಕರಿಸುವ ಮೂಲಕ ಶಿವರಾಜ್ ಕುಮಾರ್ ಭಿನ್ನ ನಟನಾಗಿ ಗುರುತಿಸಿಕೊಂಡಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!