ರಮ್ಯಾ ಪರ ಶಿವರಾಜ್​ ಕುಮಾರ್ ಬ್ಯಾಟ್

ನಟ ದರ್ಶನ್ ಕೇಸಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಯಾಂಡಲ್​ವುಡ್​ ನಟಿ ರಮ್ಯಾ ಅವರು  ಪ್ರತಿಕ್ರಿಯೆ ನೀಡಿದಕ್ಕೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್​ ಮಾಡಿದ ಸಂಬಂಧ ರಮ್ಯಾ ಪರವಾಗಿ ನಟ ಶಿವರಾಜ್​ ಕುಮಾರ್ ಬ್ಯಾಟ್ ಬೀಸಿದ್ದಾರೆ.

‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಮಹಳೆಯರನ್ನು ಗೌರವಿಸುವುದನ್ನು ಕಲಿಯಬೇಕು. ಸೋಷಿಯಲ್ ಮೀಡಿಯಾ ತುಂಬಾ ಬಲಿಷ್ಟವಾದ ಅಸ್ತ್ರ. ಅವಾಚ್ಯ ಪದಗಳಿಂದ ನಿಂದಿಸಿ ದ್ವೇಷ ಅಸೂಯೆ ಬಿತ್ತಬಾರದು. ನಾವು ಸದಾ ರಮ್ಯಾ ಜೊತೆ ನಿಲ್ಲತ್ತೇವೆ’ ಎಂದು  ಶಿವಣ್ಣ ಪೋಸ್ಟ್ ಹಾಕಿದ್ದಾರೆ.

‘ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ. ರಮ್ಯಾ ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಇಂತಿ ಶಿವರಾಜ್‌ಕುಮಾರ್, ಗೀತಾ ಶಿವರಾಜ್ ಕುಮಾರ್’ ಎಂದು ಬರೆದುಕೊಂಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!