ಶಿವಣ್ಣ ಕೇವಲ ನಾಮಕಾವಸ್ಥೆಗಾ?
ಶಿವರಾಜ್ಕುಮಾರ್ ಮತ್ತು ಸುದೀಪ್ ಅಭಿನಯದ, ಪ್ರೇಮ್ ನಿರ್ದೇಶನದ ಚಿತ್ರ ಬಿಡುಗಡೆಯಾಗಿ ಯಾವ ಮಟ್ಟದ ಸುದ್ದಿ ಮಾಡುತ್ತದೋ ಗೊತ್ತಿಲ್ಲ. ಆದರೆ ಬಿಡುಗಡೆಗೂ ಮುಂಚೆ ಡೈರೆಕ್ಟರ್ ಪ್ರೇಮ್ರ ಬುಡುಬುಡುಕೆಯ ಸದ್ದು ಸಾಕಷ್ಟು ಜೋರಾಗಿಯೇ ಕೇಳಿಸುತ್ತಿದೆ. ಸಿನಿಮಾ ಪೋಸ್ಟರ್ ಡಿಸೈನರ್ ಅವೀಸ್ ಬತ್ತಳಿಕೆಯಿಂದ ಹೊರ ಬಂದಿರುವ ಕ್ರಿಯೇಟಿವ್ ಪೋಸ್ಟರ್ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವುದು ಸುಳ್ಳಲ್ಲ. ಪ್ರೇಮ್ ಚಿತ್ರದಲ್ಲಿ ಏನನ್ನು ತೋರಿಸುತ್ತಾರೆ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿದ್ದರೂ, ಅವೀಸ್ ಸಾಕಷ್ಟು ಸಂಗತಿಗಳನ್ನು ಪೋಸ್ಟರ್ನಲ್ಲಿ ಬಿಚ್ಚಿಟ್ಟಿದ್ದಾರೆ. ಆದರೆ ಅವೀಸ್ ಬಿಚ್ಚಿಟ್ಟ ಕ್ರಿಯೇಟೀವ್ ಸತ್ಯಗಳು ಚಿತ್ರದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಬಿಡಿ. ಇನ್ನು, ತನ್ನ ಚಿತ್ರವನ್ನು ಸದಾ ಸುದ್ದಿಯಲ್ಲಿಡುವ ಪ್ರೇಮ್ ವಿಲನ್ ಐಸ್ಕ್ರೀಮ್ ಪಬ್ಲಿಸಿಟಿ’ಯ ಮೂಲಕವೂ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಅದಾಗಲೇ ತಕ್ಕಮಟ್ಟಿಗೆ ತಂಪಾಗಿಸಿದ್ದಾರೆ.
ಆದರೆ, ಗಾಂಧಿನಗರದ ಗಲ್ಲಿಗಳಲ್ಲಿ `ವಿಲನ್’ ಚಿತ್ರದ ವಿರುದ್ಧ ಒಂದಷ್ಟು ಜನ ವಿಲನ್ಗಳು ಹುಟ್ಟಿಕೊಂಡಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರದ್ದು ಜಸ್ಟ್ ಗೆಸ್ಟ್ ಅಪೀಯರೆನ್ಸ್ ಅಂತೆ.. ಕೇವಲ ಪಬ್ಲಿಸಿಟಿಗಾಗಿ ಪ್ರೇಮ್ ಹ್ಯಾಟ್ರಿಕ್ ಹೀರೋನ ಬಳಸಿಕೊಂಡಿದ್ದಾರಂತೆ.. ಪ್ರೇಮ್ ಟೀಮ್ನಲ್ಲಿ ಕೆಲಸಮಾಡಿವರೇ, `ಚಿತ್ರದಲ್ಲಿ ಎನೂ ಇಲ್ಲ.. ಬರೀ ಪಬ್ಲಿಸಿಟಿ ಗಿಮಿಕ್’ ಅಂತನ್ನುತ್ತಿದ್ದಾರಂತೆ. ಚಿತ್ರ ರಿಲೀಸ್ ಆದ ಮೇಲೆ ಪ್ರೇಮ್ ಮೊಬೈಲ್ ಸ್ವಿಚ್ ಆಫ್ ಆಗಿ, ಶಿವರಾಜ್ಕುಮಾರ್ ಅಭಿಮಾನಿಗಳು ಪ್ರೇಮ್ ಮನೆಗೆ ಕಲ್ಲು ಹೊಡೆಯೋದು ಆಲ್ಮೋಸ್ಟ್ ಕಮಫ್ರ್ಮ್ ಅಂತೆ.. ಹೀಗೆ ಅಂತೆ-ಕಂತೆಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಈ ಅಂತೆ-ಕಂತೆಗಳಿಗೆ ಬ್ರೇಕ್ಸಿಗಲು ಅಕ್ಟೋಬರ್18ವರೆಗೆ ಕಾದರೆ ಸಾಕು. ಒಟ್ಟಿನಲ್ಲಿ, `ವಿಲನ್’ ಚಿತ್ರದಿಂದಾಗಿ ಶಿವರಾಜ್ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ಪರಸ್ಪರ ವಿಲನ್ಗಾಗಿ ಕಚ್ಚಾಡದಿದ್ದರೆ ಸಾಕು. ಏನಂತೀರಿ?
-ಭೀಮರಾಯ
Be the first to comment