ಮೆಗಾಸ್ಟಾರ್ ಚಿರಂಜೀವಿ ಸುಪುತ್ರ ಮೆಗಾಪವರ್ ಸ್ಟಾರ್ ರಾಮ್ ಚರಣ್ ಹೊಸ ಸಿನಿಮಾ ‘RC-16’ ಗೆ ಶಿವಣ್ಣಎಂಟ್ರಿ ಕೊಟ್ಟಿದ್ದಾರೆ.
‘ಉಪ್ಪೇನ’ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಸಿ 16 ಚಿತ್ರದ ಶೂಟಿಂಗ್ ಗೆ ಸ್ಟಾರ್ಟ್ ಸಿಕ್ಕಿದೆ. ಹೈದ್ರಾಬಾದ್ ನಲ್ಲಿ ಇಂದಿನಿಂದ ಚಿತ್ರೀಕರಣ ಶುರುವಾಗಿದ್ದು, ನಟ ರಾಮ್ ಚರಣ್ ಹಾಗೂ ಶಿವಣ್ಣ ಭಾಗಿಯಾಗುತ್ತಿದ್ದಾರೆ. ಎರಡು ದಿನ ಆರ್ ಸಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿರುವ ಶಿವಣ್ಣ ಆ ಬಳಿಕ 131 ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಲಿದ್ದಾರೆ.
ಇತ್ತೀಚೆಗಷ್ಟೇ ಆರ್ ಸಿ16 ಚಿತ್ರದ ಶಿವಣ್ಣ ಅವರ ಲುಕ್ ಟೆಸ್ಟ್ ನಡೆದಿತ್ತು. ಶಿವಣ್ಣ ಕ್ರೇಜಿ ಲುಕ್ ನೋಡಿ ಬುಚ್ಚಿ ಬಾಬು ಕ್ಲೀನ್ ಬೋಲ್ಡ್ ಆಗಿದ್ದರು. ಈ ಸಿನಿಮಾವನ್ನು ಸುಕುಮಾರ್ ರೈಟಿಂಗ್ಸ್, ವೃದ್ಧಿ ಸಿನಿಮಾಸ್ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಎ ಆರ್ ರೆಹಮಾನ್ ಅವರು ಸಂಗೀತ ನೀಡುತ್ತಿದ್ದಾರೆ.
ಆರ್ ಸಿ 16 ಚಿತ್ರದಲ್ಲಿ ರಾಮ್ ಚರಣ್, ಜಾಹ್ನವಿ ಕಪೂರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಜೈಲರ್’ ಬಳಿಕ ಶಿವಣ್ಣಗೆ ತಮಿಳು ಹಾಗೂ ತೆಲುಗು ಭಾಷೆಯ ಚಿತ್ರರಂಗದಿಂದ ಒಳ್ಳೆ ಆಫರ್‌ಗಳು ಬರುತ್ತಿವೆ.
—-

Be the first to comment