ಶಿವಣ್ಣ ನಟನೆಯ ಘೋಸ್ಟ್ ಪೋಸ್ಟರ್ ರಿಲೀಸ್

ಗಾನಗಂಧರ್ವ ರಾಜಕುಮಾರ್ ಅವರ ಹುಟ್ಟು ದಿನದಂದು ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಚಿತ್ರತಂಡ ಶಿವರಾಜಕುಮಾರ ನಟನೆಯ ಘೋಸ್ಟ್ ಸಿನಿಮಾದ ಕಾನ್ಸೆಪ್ಟ್ ಪೋಸ್ಟರ್ ರಿಲೀಸ್ ಮಾಡಿದೆ.

ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ವಿರುವ ಚಿತ್ರಕ್ಕೆ ಶ್ರೀನಿ ಆಕ್ಷನ್ ಕಟ್ ಹೇಳಿದ್ದಾರೆ. ಘೋಸ್ಟ್ ಸಿನಿಮಾ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಬಹಳ ಕಾತುರ ಹೆಚ್ಚಾಗಿದೆ.
ಘೋಸ್ಟ್ ಸಿನಿಮಾದ ಪೋಸ್ಟರ್ ನಲ್ಲಿ ಶಿವಣ್ಣ ಅವರು ಏಕೆ-47 ಮಾದರಿಯ ಗನ್ ಹಿಡಿದುಕೊಂಡಿದ್ದು ಪೋಸ್ಟರ್ ಮುಂಭಾಗದಲ್ಲಿ ಕಂಬಿಗಳು ಇವೆ. ಅಭಿಮಾನಿಗಳಿಗೆ ಇದು ಆಕ್ಷನ್ ಸಿನಿಮಾ ಅಥವಾ ಹಾರರ್ ಸ್ಟೋರಿ ಇರಬಹುದಾ ಎಂಬ ಪ್ರಶ್ನೆ ಮೂಡಿದೆ.

ಹುಮ್ಮಸ್ಸಿನಿಂದ ಆಕ್ಷನ್ ಸಿನಿಮಾಗಳಿಗೆ ಶಿವರಾಜ್ ಕುಮಾರ್ ಅವರು ಒಪ್ಪಿಕೊಳ್ಳುತ್ತಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಸಂತಸದ ವಿಷಯ. ಫಿಟ್ನೆಸ್ ಗೆ ಹೆಚ್ಚು ಒತ್ತು ಕೊಡುವ ಶಿವಣ್ಣ ವಯಸ್ಸನ್ನು ಮೀರಿ ಯುವಕ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ಬರುತ್ತಿದೆ. ಅನೇಕ ಖ್ಯಾತ ನಟರ ಸಿನಿಮಾಗಳು ಸಿದ್ಧಗೊಳ್ಳುತ್ತಿದ್ದು, ಶಿವಣ್ಣ ನಟನೆಯ ಘೋಸ್ಟ್ ಸಿನಿಮಾ ಕೂಡಾ ಪ್ಯಾನ್ ಇಂಡಿಯಾ ಆಗಿ ತೆರೆಗೆ ಬರಲಿದೆ.

ಚಿತ್ರ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!