ಗೀತಕೃಷ್ಣಗೆ ಶಿವಣ್ಣ ಟಾಂಗ್

ಟಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಗೀತಕೃಷ್ಣ ಅವರು ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಶಿವರಾಜ್ ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

” ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ. ಕೆಜಿಎಫ್ 2 ನಿಂದ ಅದು ಫ್ರೂವ್ ಆಗಿದೆ. ಯಾರೋ ಏನು ಹೇಳಿದರು ಅಂದರೆ ಈ ಕಿವಿಯಲ್ಲಿ ಕೇಳಬೇಕು, ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನು ತೋರಿಸುತ್ತೆ. ಇಂಥವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಪ್ರಯೋಜನ ಜಾಸ್ತಿ ಆಗುತ್ತೆ” ಎಂದು ತಿರುಗೇಟು ನೀಡಿದ್ದಾರೆ.

“ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ನಮ್ಮ ಚಿತ್ರರಂಗ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರೆಗೂ ಎಲ್ಲಾ ಕಲಾವಿದರು ಇಂಡಸ್ಟ್ರಿಯನ್ನು ದೊಡ್ಡ ಮಟ್ಟಕ್ಕೆ ಬೆಳಿಸಿದ್ದಾರೆ. ಇಂಥವರ ಕೀಳು ಮಾತಿಗೆ ಕಿವಿ ಕೊಡದೆ, ನೆಗ್ಲೆಟ್ ಮಾಡಬೇಕು” ಎಂದಿದ್ದಾರೆ.

ನಿರ್ದೇಶಕ ಗೀತಕೃಷ್ಣ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ನಟಿಯೊಬ್ಬಳು ನನ್ನನ್ನೇ ಮಂಚಕ್ಕೆ ಕರೆದುಬಿಟ್ಟಳು. ಲೈಂಗಿಕ ಕಿರುಕುಳ ಹೆಣ್ಣುಮಕ್ಕಳ ಮೇಲೆ ಆಗುತ್ತದೆ ಎಂದು ಕೇಳಿದ್ದೀರಿ. ಕನ್ನಡದಲ್ಲಿ ಗಂಡು ಮಕ್ಕಳ ಮೇಲೂ ಹೀಗೆ ಆಗುತ್ತಿದೆ ಎಂದು ನಾನು ಸ್ವತಃ ಅನುಭವಿಸಿದೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು.

“ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ತಮಿಳು ಚಿತ್ರರಂಗದವರು ತುಂಬಾ ಅಸಹ್ಯ. ಕನ್ನಡದವರು ಇನ್ನೂ ಅಸಹ್ಯ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಿಂದ. ಖ್ಯಾತ ನಟಿಯಿಂದ ನನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಅವಕಾಶ ಬೇಕು ಎಂದು ಕನ್ನಡದಲ್ಲಿ ಮಂಚ ಏರುವುದು ಕಾಮನ್ ಆಗಿಬಿಟ್ಟಿದೆ. ಈ ಕಾರಣಕ್ಕೆ ನಾನು 20 ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಸಹವಾಸ ಬಿಟ್ಟೆ’ ಎಂದು ಅವರು ಹೇಳಿದ್ದರು.

ಸಂದರ್ಶನದ ಮಾತು ವಿವಾದ ಆಗುತ್ತಿದ್ದಂತೆ ತಾನು ಹೀಗೆ ಹೇಳಿಲ್ಲ. ಕನ್ನಡ ಸಿನಿಮಾರಂಗವನ್ನು ಅವಹೇಳನ ಮಾಡಿಲ್ಲ ಎಂದು ಅವರು ಉಲ್ಟಾ ಹೊಡೆದಿದ್ದರು.

“ನಾನು ಕನ್ನಡ ಸಿನಿಮಾ ರಂಗದ ಕುರಿತು ಅವಹೇಳನವಾಗುವ ಯಾವುದೇ ಮಾತಗಳನ್ನು ಹೇಳಿಲ್ಲ. ಕನ್ನಡದ ನಟಿಯೊಬ್ಬರು ಮಂಚಕ್ಕೆ ಕರೆದಿದ್ದರು ಎಂದು ಹೇಳಿಲ್ಲ. ಸಿನಿಮಾ ರಂಗದಲ್ಲಿ ಕಾಮನ್ ಆಗಿ ಹೀಗೆ ನಡೆಯುತ್ತದೆ ಎಂದು ಹೇಳಿದ್ದೆ. ಅದನ್ನೇ ಇಷ್ಟೊಂದು ದೊಡ್ಡದು ಮಾಡಲಾಗುತ್ತಿದೆ. ನಾನು ಆ ರೀತಿಯಲ್ಲಿ ಹೇಳಿಯೇ ಇಲ್ಲ’ ಎಂದು ಹೇಳಿಕೆ ನೀಡಿದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!