ಶಿವಣ್ಣ- 40 ವರ್ಷ: ‘ಕಲರ್ಸ್’ ಕಾರ್ಯಕ್ರಮ

ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಸೆಲೆಬ್ರೇಟ್ ಮಾಡಲು ಕಲರ್ಸ್ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.

ಶನಿವಾರ ಹಾಗೂ ಭಾನುವಾರ ಸಂಜೆ 7ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ. ಅವರ ಮೊದಲ ಚಿತ್ರ ‘ಆನಂದ’ 39ನೇ ವಾರ್ಷಿಕೋತ್ಸವವನ್ನೂ ಈ ಕಾರ್ಯಕ್ರಮದಲ್ಲಿ ಆಚರಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಶಿವರಾಜ್​ಕುಮಾರ್ ನಟಿಸಿದ ಮೊದಲ ಚಿತ್ರ ‘ಆನಂದ್’ 1986ರ ಜೂನ್ 19ರಂದು ರಿಲೀಸ್ ಆಯಿತು. ಸಿಂಗೀತಮ್ ಶ್ರೀನಿವಾಸ್ ರಾವ್  ಚಿತ್ರ ನಿರ್ದೇಶನ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಶಿವಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 40 ವರ್ಷಗಳು ಕಳೆದಿವೆ.

ಶಿವಣ್ಣನ ವೃತ್ತಿ ಬದುಕಿನ ಖುಷಿಯನ್ನು ಕಲರ್ಸ್ ಕನ್ನಡ ವೇದಿಕೆ ಮೇಲೆ ಸಂಭ್ರಮಿಸಲಾಗಿದೆ. ಆ ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದೆ.  ಶಿವರಾಜ್​ಕುಮಾರ್ ಅವರ ಈ ವಿಶೇಷ ಮೈಲಿಗಲ್ಲನ್ನು ಕಲರ್ಸ್ ಕನ್ನಡ ವಾಹಿನಿ ಸಂಭ್ರಮಿಸುತ್ತಿದೆ. ಕಲರ್ಸ್ ಕನ್ನಡ ಆರಂಭ ಆಗಿ 1 ದಶಕ ಕಳೆದಿದೆ. ಈ ದಶಕದ ಸಂಭ್ರವನ್ನು ವಾಹಿನಿ ಅದ್ದೂರಿಯಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮನಿಸಿದ್ದರು. ಶಿವರಾಜ್​ಕುಮಾರ್  ವೇದಿಕೆ ಏರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!