ಶಿವರಾಜಕುಮಾರ್ ನಟನೆಯ 135ನೇ ಚಿತ್ರ ಘೋಷಣೆ ಆಗಿದ್ದು, ಈ ಚಿತ್ರವನ್ನು ರಾಜಾ (ರಮೇಶ್ ಕುಮಾರ್) ಅಫ್ರೋಡೈಟ್ ರೆನೈಸಾನ್ಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.
‘ಪದವಿಪೂರ್ವ’ ಖ್ಯಾತಿಯ ಹರಿ ಜಯಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೆಗಾ ಫ್ಯಾಮಿಲಿ ಎಂಟರ್ಟೈನರ್ ಎಂದು ಹೇಳಲಾಗುವ ಈ ಚಿತ್ರದಲ್ಲಿ ಶಿವಣ್ಣ ವಿಶೇಷ ಮತ್ತು ಅಸಾಂಪ್ರದಾಯಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಯೋಜಿಸಿದೆ. ನಾಯಕಿ ಮತ್ತು ಇತರ ಪ್ರಮುಖ ಪಾತ್ರಗಳನ್ನು ಅಂತಿಮಗೊಳಿಸಲಾಗುತ್ತಿದೆ. ತಾಂತ್ರಿಕ ತಂಡ ಮತ್ತು ಪೋಷಕ ಪಾತ್ರವರ್ಗದ ಬಗ್ಗೆ ಇನ್ನೂ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಚಿತ್ರತಂಡ ಶೀಘ್ರದಲ್ಲೇ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಯೋಜಿಸಿದೆ.
ಶಿವರಾಜ್ಕುಮಾರ್ ಸದ್ಯ ಡ್ಯಾಡ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೇಮಂತ್ ಎಂ ರಾವ್ ನಿರ್ದೇಶನದ 666 ಆಪರೇಷನ್ ಡ್ರೀಮ್ ಥಿಯೇಟರ್ನ ಭಾಗವಾಗಿರುವ ಶಿವರಾಜಕುಮಾರ್ , ಶೀಘ್ರದಲ್ಲೇ ಪವನ್ ಒಡೆಯರ್ ನಿರ್ದೇಶನದ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
ರಾಮ್ ಚರಣ್ ನಟಿಸಿರುವ ತೆಲುಗು ಚಿತ್ರದಲ್ಲೂ ಶಿವರಾಜಕುಮಾರ್ ನಿರತರಾಗಿದ್ದಾರೆ. ಶೀಘ್ರದಲ್ಲೇ ರಜನಿಕಾಂತ್ ಅವರ ಜೈಲರ್ 2 ಸೆಟ್ಗೆ ಸೇರಲಿದ್ದಾರೆ.
—-





Be the first to comment