ಕಬ್ಜದಲ್ಲಿ ನನ್ನ ಅತಿಥಿ ಪಾತ್ರ ಅಚ್ಚರಿಯ ಪ್ಯಾಕೇಜ್ ಆಗಿರುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇದುಆಶ್ಚರ್ಯಕರ ಪ್ಯಾಕೇಜ್ ಆಗಿದ್ದು, ಇದನ್ನು ಚಿತ್ರಮಂದಿರಗಳಲ್ಲಿ ಅನುಭವಿಸಬೇಕು ಎಂದು ಶಿವಣ್ಣ ಹೇಳಿದ್ದಾರೆ.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಉಪೇಂದ್ರ ಅವರೊಂದಿಗೆ ಶಿವರಾಜ್ ಕುಮಾರ್ ಅವರು ಚಿತ್ರದ ಭಾಗಗಳಿಗೆ ಭಾನುವಾರ ಡಬ್ಬಿಂಗ್ ಮಾಡಿದ್ದಾರೆ.
ಆರ್ ಚಂದ್ರು ಬರೆದು ನಿರ್ದೇಶಿಸಿರುವ ಈ ಚಿತ್ರವು ಮಾರ್ಚ್ 17 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಉಪೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರವು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕಥೆಯನ್ನು ಒಳಗೊಂಡಿದೆ.
ಶ್ರಿಯಾ ಶರನ್ ನಾಯಕಿಯಾಗಿ ನಟಿಸುತ್ತಿದ್ದು, ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಜಗಪತಿ ಬಾಬು, ಡ್ಯಾನಿಶ್ ಅಕ್ತರ್ ಸೈಫಿ, ಕಬೀರ್ ದುಹಾನ್ ಸಿಂಗ್ ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಇದ್ದಾರೆ.
ಕಬ್ಜ ಚಿತ್ರವನ್ನು ನಿರ್ದೇಶಕ ಆರ್ ಚಂದ್ರು ಅವರು ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ನಡಿಯಲ್ಲಿ ಅಲಂಕಾರ್ ಪಾಂಡಿಯನ್ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಕಬ್ಜ ಸಿನಿಮಾದ ಹಿಂದಿ ಆವೃತ್ತಿಯನ್ನು ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ವಿತರಿಸಲಿದೆ.
___

Be the first to comment