ರಮೇಶ್ ಅರವಿಂದ್ ರವರ 101 ನೇ ಚಿತ್ರವಾದ ಶಿವಾಜಿ ಸುರತ್ಕಲ್ ಫೆಬ್ರವರಿ 21 ರಂದು ಬಿಡುಗಡೆಯಾಗಿ ಮೂರು ವಾರದ ವರೆಗೆ ಯಶಸ್ವಿ ಪ್ರದರ್ಶನ ಕಂಡಿತು. ಪತ್ರಕರ್ತರಿಂದ ಹಾಗೂ ಸಿನಿ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿತ್ತು. ಜಗತ್ತಿನಾದ್ಯಂತ ಹರಡಿರುವ ಛಿoviಜ 19 ಡಿಸೀಸ್ ನ ಕಾರಣದಿಂದ ಸಾರ್ವಜನಿಕರು ಚಿತ್ರಮಂದಿರಗಳಿಂದ ದೂರ ಉಳಿಯಬೇಕಾಯಿತು.
ಒಂದು ಖುಷಿಯ ವಿಷಯ ಏನೆಂದರೆ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು ಃ4u movies ಅವರು ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂದಿ ಅವತರಣೆಯ ನಾಯಕ ನಟ, ನಿರ್ದೇಶನ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಕನ್ನಡದ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ರವರು ನಿರ್ದೇಶಿಸಿದ್ದು ಅಭಿಜಿತ್ ರಮೇಶ್ ಮತ್ತು ಆಕಾಶ್ ಶ್ರೀವತ್ಸ ರವರು ಚಿತ್ರಕಥೆಯನ್ನು ಬರೆದಿದ್ದಾರೆ.
ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನೂಪ್ ಗೌಡ ಹಾಗೂ ರೇಖಾ ಕೆ.ಎನ್ ರವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರು ಬಿಡುಗಡೆಯ ಸಮಯದಲ್ಲೇ ನೀಡಿದ ಹೇಳಿಕೆಯ ಪ್ರಕಾರ ಚಿತ್ರದ ಎರಡನೇ ಭಾಗ (ಶಿವಾಜಿ ಸುರತ್ಕಲ್ – 2 ) ರ ಚಿತ್ರಕಥೆ ಕೆಲಸ ನಡೆಯುತ್ತಿದೆ.
ಆಕಾಶ್ ಶ್ರೀವತ್ಸ ಹಾಗೂ ರಮೇಶ್ ಅರವಿಂದ್ ರವರು ವಿಡಿಯೋ ಕಾಲ್ ಮುಖಾಂತರ ಚಿತ್ರಕಥೆಯ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಲಾಕ್ ಡೌನ್ ಮುಗಿದ ನಂತರ ಶಿವಾಜಿ ಸುರತ್ಕಲ್ – 2 ಪ್ರಾರಂಭವಾಗುವ ಸಾಧ್ಯತೆಗಳಿವೆ. ಇನ್ನ ಕೆಲವು ದಿನಗಳಲ್ಲಿ ಬೇರೆ ಭಾಷೆಯ ಡಬ್ಬಿಂಗ್ ಹಾಗೂ ರಿಮೇಕ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಚಿತ್ರತಂಡ ನೀಡಲಿದೆ.
Pingback: loker bkkbn 2021
Pingback: 메이저토토