‘ಶಿವಾಜಿ ಸೂರತ್ಕಲ್‘ ಚಿತ್ರದ ಶೀರ್ಷಿಕೆಯೂ ಹೌದು, ಮುಖ್ಯ ಪಾತ್ರದ ಹೆಸರೂ ಹೌದು. ರಾಜ್ಯದ ಪೋಲೀಸ್ ಇಲಾಖೆಯ ಕ್ರೈಂ ಬ್ರಾಂಚ್ ನ ಅತಿಮುಖ್ಯ ವ್ಯಕ್ತಿ ಶಿವಾಜಿ. ತೀಕ್ಷ್ಣ ಬುದ್ಧಿಯ, ಅಸಾಧಾರಣ ಯೋಚನಾ ಶಕ್ತಿಯುಳ್ಳ ಶಿವಾಜಿ ಬಹುಬೇಡಿಕೆಯ ಪತ್ತೆದಾರಿ ಪೋಲೀಸ್ ಅಧಿಕಾರಿ. ಕ್ರೈಂ ಸೀನ್ ಅನ್ನು ಒಮ್ಮೆ ನೋಡಿ, ಕೊಲೆಗಾರನನ್ನು ಪತ್ತೆ ಮಾಡುವ ಅವರ ಚಾಣಾಕ್ಷ ಬುದ್ಧಿಗೆ ಸಮ ಯಾರೂ ಇಲ್ಲ.
ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಶಿವಾಜಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆಂದು ಅವರಿಗೊಂದು ವಿಷೇಶ ಲುಕ್ ಕೊಡಲಾಗಿದೆ. ಇದೇ ಮೊದಲ ಬಾರಿಗೆ ರಮೇಶ್ ಅವರು ಸುಮಾರು ನಾಲ್ಕು ತಿಂಗಳ ಕಾಲ ಶೇವ್ಮಾಡುವಂತಿರಲಿಲ್ಲ! ರಮೇಶ್ ಅರವಿಂದ್ ಅವರಿಗೆ ಈ ವಿಶಿಷ್ಠ ಗೆಟ್ ಅಪ್ ಯಾಕೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ವಿವರಿಸುತ್ತಾರೆ. ಚಿತ್ರದಲ್ಲಿ ಎರಡು ವಿಭಿನ್ನ ಕಾಲ ಘಟ್ಟಗಳಿವೆ. ಒಂದು ಪ್ರಸ್ತುತ ನಡೆಯುವ ಕಥೆ. ಮತ್ತೊಂದು ಘಟಿಸಿ ಹೋದಗತ ಕಾಲದ ಒಂದು ಕಥೆ ಈ ಎರಡರ ನಡುವೆ ಹರಿದಾಡುವ ಶಿವಾಜಿಯವರ ಪಾತ್ರದಲ್ಲಿ ಯಾವ ಗೊಂದಲವೂ ಇರಬಾರದೆಂದು ಅವರಿಗೆ ಈ ಲುಕ್, ಎಂದರು ಆಕಾಶ್.ಶಿವಾಜಿಯ ಪಾತ್ರದ
ಬಗ್ಗೆ ಮಾತನಾಡುತ್ತಾ, ಆಕಾಶ್ ಮುಂದುವರಿಸುತ್ತಾರೆ. “ಶಿವಾಜಿಯ ಪಾತ್ರವೇ ವಿಭಿನ್ನ. ಎಲ್ಲರಂತಿಲ್ಲ. ಆದರೂ ಎಲ್ಲರಿಗೂ ಇರುವ ಮಾನವ ಸಹಜವಾದಂತಹ ಭಾವನೆಗಳು ಅವರಿಗೂ ಇದೆ. ಸಿಟ್ಟು, ಬೇಸರ, ಹತಾಶೆಎಲ್ಲವೂ ಅವರಿಗೂ ಆಗುತ್ತದೆ. ಹಾಗಾಗಿ ಆ ಪಾತ್ರ ಎಲ್ಲರಿಗೂ ಹತ್ತಿರವಾಗುತ್ತದೆ. ಅದೇ ಸಮಯ, ಅವರೊಬ್ಬ ಪೋಲೀಸ್ ಎಂದು ಮರೆಯಬಾರದು. ನಗುನಗುತ್ತಾ ಸತ್ಯವನ್ನು ಹೊರಗೆಳೆಯುವ ಅವರ ಮಾಂತ್ರಿಕ ಮಾತುಗಾರಿಕೆ ಎಲ್ಲರನ್ನೂಬೆರಗುಗೊಳಿಸುತ್ತದೆ. ಈ ಪಾತ್ರಕ್ಕಾಗಿ ಸುಮಾರು ಜನ ಪೋಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಮಾತನಾಡಿಸಿದ್ದೇವೆ. ಅವರ ಕಾರ್ಯ ವೈಖರಿ ಹೇಗಿರುತ್ತೆ, ಎಲ್ಲವೂ ವಾಸ್ತವಕ್ಕೆ ಹತ್ತಿರವಿರಬೇಕು ಎಂಬುದು ನಮ್ಮ ಆಶಯ. ಶಿವಾಜಿಯವರಮಾತುಕತೆ ಕೂಡ ಎಲ್ಲರಂತಲ್ಲ. ಯಾರೊಬ್ಬರೊಡನೆ ಮಾತನಾಡುವಾಗಲೂ, ಅವರಂತೆಯೇ ಅನುಕರಿಸಿ ಮಾತನಾಡುವ ಪ್ರತಿಭಾವಂತ ಅವರು.ಚಿತ್ರದ ಚಿತ್ರೀಕರಣ ಶೇಖ್ಹಡ ಎಂಭತ್ತರಷ್ಟು ಮುಗಿದಿದೆ. ಬಹುಪಾಲು ಚಿತ್ರೀಕರಣ ಮಡಿಕೇರಿಯಲ್ಲಾದರೆ, ಮಿಕ್ಕದ್ದು ಬೆಂಗಳೂರಿನಲ್ಲಿ ನಡೆದಿದೆ. ಒಂದು ಹಂತದ ಸಂಕಲನ ಕೂಡ ಪ್ರಾರಂಭವಾಗಿದೆ.
ಚಿತ್ರದ ತಾಂತ್ರಿಕ ತಂಡಕ್ಕೆ ಬರುವುದಾದರೆ, ಆಕಾಶ್ ಹಾಗೂ ಅಭಿಜಿತ್ ಚಿತ್ರಕಥೆ ಬರೆದಿದ್ದಾರೆ. ಗುರುಪ್ರಸಾದ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಜೂಡಾ ಸ್ಯಾಂಡಿ. ಶಚಿನಾ ಹೆಗ್ಗಾರ್ ಅವರು ವಸ್ತ್ರವಿನ್ಯಾಸ ಮಾಡಿದ್ದಾರೆ. ಖ್ಯಾತ ಸಂಕಲನಕಾರ ಶ್ರೀಕಾಂತ್ ರವರು ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ.ಇನ್ನು ತಾರಾಗಣ. ರಾಧಿಕಾ ನಾರಾಯಣ್ ಶಿವಾಜಿಯ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಆಕೆ ಒಬ್ಬ ಲಾಯರ್. ಆರೋಹಿ ನಾರಾಯಣ್ ಒಬ್ಬ ಮನೋವೈದ್ಯೆಯಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟ ರಾಘವೇಂದ್ರಅವರು ಶಿವಾಜಿಯ ಸಹಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಚಿತ್ರದ ಮಿಕ್ಕ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಬರುವ ದಿನಗಳಲ್ಲಿ ಬಹಿರಂಗ ಪಡಿಸುತ್ತಾರೆ.ತಾಂತ್ರಿಕವಾಗಿ ಈ ಚಿತ್ರ ಒಂದು ಸವಾಲೇ ಸರಿ. ಸಂಕೀರ್ಣವಾದ ಒಂದು ಕಥೆಯನ್ನು ಸರಳ ಮಾರ್ಗದಲ್ಲಿ ವೀಕ್ಷಕರಿಗೆ ತಲುಪಿಸುವುದು ತುಂಬಾ ಕಷ್ಟ. ಆದರೆ ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು.ಚಿತ್ರಕಥೆಯಿಂದ ಹಿಡಿದು, ದೃಶ್ಯಗಳನ್ನು ಕಟ್ಟುವ ಕ್ರಮದ ವರೆಗೆ ಎಲ್ಲಿಯೂ ಕಥೆಯ ಕೌತುಕತೆ ನೀರಸವಾಗದಂತೆ ಹೇಳುವ ಪ್ರಯತ್ನ ನಡೆದಿದೆ. ಸಾಮಾನ್ಯ ಥ್ರಿಲ್ಲರ್ ಎಂದರೆ, ಅದರಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯವಿರುವುದಿಲ್ಲ. ಆದರೆ ಈಚಿತ್ರದಲ್ಲಿ ಹಾಗಿಲ್ಲ. ಥ್ರಿಲ್ಲರ್ ನ ಎಲ್ಲಾ ಗುಣಗಳನ್ನೂ ಉಳಿಸಿಕೊಂಡು, ಒಂದು ಭಾವನಾತ್ಮಕವಾದ ಕಥೆಯನ್ನೂ ಕಟ್ಟುವ ಒಂದು ವಿಭಿನ್ನ ಪ್ರಯತ್ನ ನಡೆದಿದೆ. ಅದೇ ನಮ್ಮ ಚಿತ್ರದ ವಿಶಿಷ್ಠತೆ ಎನ್ನುತ್ತಾರೆ ಆಕಾಶ್.
ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ‘ಅಂಜನಾದ್ರಿ ಸಿನಿ ಕ್ರಿಯೇಶನ್ಸ್’ ನ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ
Be the first to comment