ಶಿವಾಜಿ ಸುರತ್ಕಲ್ ಚಿತ್ರ ಗೆಲುವಿನ ಹಾದಿಯಲ್ಲಿದೆ. ಹಾಗಂತ ಚಿತ್ರತಂಡ ಖುಷಿಯಾಗಿದೆ.
ಚಿತ್ರದ ನಾಯಕ ರಮೇಶ್ ಅರವಿಂದ್ ಅವರು ಶಿವಾಜಿ ಸುರತ್ಕಲ್ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಮಾತನಾಡುತ್ತಾ, “ಸಿನಿಮಾ ಪ್ರೇಕ್ಷಕರಿಗೆ ಗುಳಿಕೆನ್ನೆಯನ್ನು ಮಾತ್ರ ತೋರಿಸಿ ಇದು ಯಾರೆಂದು ಕೇಳಿದರೆ ರಚಿತಾ ರಾಮ್ ಅಂತ ಹೇಳ್ತಾರೆ. ವಿಷ್ಣುವರ್ಧನ್ ಅವರ ಮೂಗು ತೋರಿಸಿದರೆ ಜನರು ವಿಷ್ಣುವರ್ಧನ್ ಎಂದು ಕಂಡು ಹಿಡಿಯುತ್ತಾರೆ. ಹಾಗಾಗಿ ಇಷ್ಟೊಂದು ಇಂಟಲಿಜೆಂಟ್ ಆಗಿರುವ ಪ್ರೇಕ್ಷಕರಿಗಾಗಿ ಒಂದು ಹೊಸ ಇಮೇಜ್ ನಲ್ಲಿ ಬರಬೇಕು ಅಂದರೆ ಅದಕ್ಕೊಂದು ಧೈರ್ಯ ಬೇಕು. ಈ ಸಿನಿಮಾದ ಕಂಟೆಂಟ್ ಕೇಳಿದಾಗ ಆ ಧೈರ್ಯ ಬಂತು. ಮತ್ತು ಜನರಿಗೂ ಇಷ್ಟವಾಗಿದೆ” ಎಂದರು.
ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ವರ್ಷಗಳ ಹಿಂದೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಸಿನಿಮಾ ಹೌಸ್ ಫುಲ್ ಆಗಿ ಒಳ್ಳೆಯ ಪ್ರದರ್ಶನ ನೀಡಬೇಕು ಎಂಬ ಕನಸು ನನ್ನದಾಗಿತ್ತು, ಅದು ನಮ್ಮ ಚಿತ್ರದಿಂದಲೇ ಆಯಿತು ಎಂಬ ಹೆಮ್ಮೆ ನನಗಿದೆ, ಯು.ಎಸ್ ನಲ್ಲಿ ತಿಂಗಳಾಂತ್ಯಕ್ಕೆ 25 ರಿಂದ 30 ಶೋ ಗಳು ಪ್ರದರ್ಶನ ಕಾಣಲಿವೆ. ಆಸ್ಟ್ರೇಲಿಯಾದಲ್ಲಿ ಚಿತ್ರ ಈಗಾಗಲೇ ತೆರೆ ಕಂಡಿದೆ. ಚಿತ್ರಮಂದಿರಗಳ ಸಂಖ್ಯೆ 60 ರಿಂದ 120 ಕ್ಕೆ ಹೆಚ್ಚಿದೆ. ಹಿಂದಿ ಜೊತೆಗೆ ತಮಿಳು, ತೆಲುಗು ಭಾಷೆಗಳಿಗೆ ರಿಮೇಕ್ ಮಾಡಬೇಕು ಎಂಬ ಆಫರ್ ಇದೆ, ಅದನ್ನು ನಾನೇ ನಿರ್ದೇಶಿಸಬೇಕು ಎಂದೂ ಕೇಳಿಕೊಂಡಿದ್ದಾರೆ”ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಖುಷಿಯಾದರು.
ಮೊದಲ ಬಾರಿಗೆ ಸಿನಿಮಾ ನಿರ್ಮಾಪಕ ನಾಗಿ, ಸಿನಿಮಾ ಯಶಸ್ಸು ಕಾಣುತ್ತಿರುವುದು ಸಂತೋಷ ಇದೆ ಎಂದು ನಿರ್ಮಾಪಕ ಅನೂಪ್ ಗೌಡ ಹೇಳಿದರು.
Be the first to comment