ಚಿತ್ರ: ಶಿವಾಜಿ ಸುರತ್ಕಲ್ 2
ನಿರ್ದೇಶನ: ಆಕಾಶ್ ಶ್ರೀವತ್ಸ
ನಿರ್ಮಾಣ: ರೇಖಾ, ಅನೂಪ್ ಗೌಡ
ತಾರಾ ಬಳಗ: ರಮೇಶ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ವಿನಾಯಕ ಜೋಶಿ ಇತರರು.
ರೇಟಿಂಗ್: 4/ 5
ಕೊಲೆಗಳ ಸುತ್ತ ನಡೆಯುವ ಸಸ್ಪೆನ್ಸ್ ಕಥಾ ಹಂದರದ ಸಿನಿಮಾ ಶಿವಾಜಿ ಸುರತ್ಕಲ್ 2 ಪ್ರೇಕ್ಷಕರನ್ನು ಕುತೂಹಲದ ಮೂಲಕ ಕೊನೆಯವರೆಗೂ ಹಿಡಿದು ಇಟ್ಟುಕೊಂಡು ಸಾಗುತ್ತದೆ. ಕೊಲೆ ಮಾಡಿದವನು ಯಾರು? ಕೊಲೆ ಯಾಕೆ ಮಾಡಿದ್ದು ಎನ್ನುವ ಕೊಲೆಗಾರನ ಹುಡುಕಾಟದ ಪ್ರಯತ್ನ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತದೆ.
ನಾಲ್ಕು ನಿಗೂಢ ಕೊಲೆಗಳು ನಡೆದ ಬಳಿಕ ಕೊಲೆಗಾರ ಐದನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಆಗ ಕೊಲೆಗಾರನನ್ನು ಬೆನ್ನತ್ತಿ ಹೋಗುವ ಪೊಲೀಸ್ ಅಧಿಕಾರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ನಿರ್ದೇಶಕರು ಸಾಕಷ್ಟು ಸಸ್ಪೆನ್ಸ್ ಇಟ್ಟುಕೊಂಡು ಚಿತ್ರಕಥೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಚಿತ್ರ ನೋಡಿ ಹೊರಬಂದ ಬಳಿಕ ಒಂದಷ್ಟು ದೃಶ್ಯಗಳು ಕಾಡುತ್ತವೆ. ಎದೆ ಭಾರವಾಗುತ್ತದೆ. ಕಾಡುವ ದೃಶ್ಯಗಳನ್ನು ನೋಡುವ ಆಸಕ್ತಿ ಇದ್ದರೆ ಚಿತ್ರ ನೋಡುವುದು ಒಳಿತು.
ಕೊಲೆಗಾರ ಹಾಗೂ ಅವನನ್ನು ಪತ್ತೆ ಹಚ್ಚುವ ಕಥೆಯ ನಡುವೆ ಸಿನಿಮಾದ ಮೊದಲಾರ್ಧ ಬೇಗನೆ ಮುಗಿದು ಹೋಗುತ್ತದೆ. ಎರಡನೇ ಭಾಗವು ಸಹ ಪ್ರೇಕ್ಷಕರನ್ನು ವೇಗವಾಗಿ ಚಿತ್ರದ ಜೊತೆ ಕರೆದುಕೊಂಡು ಹೋಗುತ್ತದೆ.
ಪೊಲೀಸ್ ಅಧಿಕಾರಿಯಾಗಿ ರಮೇಶ್ ಅರವಿಂದ್ ಗಮನ ಸೆಳೆಯುತ್ತಾರೆ. ರಾಧಿಕಾ ನಾರಾಯಣ್ ಅವರು ಕಾಳಜಿ ಇರುವ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಗಾಂವ್ಕರ್ ಅವರು ಪೋಲಿಸ್ ಅಧಿಕಾರಿಯಾಗಿ ಓಕೆ ಅನಿಸುತ್ತಾರೆ.
ಚಿತ್ರದ ಸಂಗೀತ ಸಾಧಾರಣ ಎನಿಸಿದೆ. ಗುರುಪ್ರಸಾದ್, ಮಧು ಅಂಬಟ್ ಅವರ ಕ್ಯಾಮರಾ ಕೆಲಸ ಚಿತ್ರವನ್ನು ಸುಂದರಗೊಳಿಸುವ ಯತ್ನ ಮಾಡಿದೆ.
____

Be the first to comment