‘ಶೈನ್‍ಟ್ಯಾಗ್’.. ರಿಯಲೀ ಶೈನ್ಸ್

ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಿಯಾ ಮರಿಯನಾಥನ್ ಅವರ ನೇತ್ರತ್ವದಲ್ಲಿ `ಶೈನ್‍ಟ್ಯಾಗ್’ಫ್ಯಾಶನ್ ರನ್‍ವೇ ಏರ್ಪಡಿಸಲಾಗಿತ್ತು. ಪ್ರಿಯಾ ಮರಿಯನಾಥನ್ ಒಡೆತನದ `ಶೈನ್‍ಟ್ಯಾಗ್’ ಕಂಪೆನಿಯ ಆರಂಭವಾಗಲು ಪ್ರೇರಣೆ ಪ್ರಿಯಾ ಅವರ ಮಗಳು ಶ್ರೇಯಾ. ತನ್ನ ಮಗಳು ಶ್ರೇಯಾ ಉಡುಪುಗಳನ್ನು ತಾನೇ ಡಿಸೈನ್ ಮಾಡುತ್ತಿದ್ದರು ಪ್ರಿಯಾ. ಪ್ರಿಯಾ ಡಿಸೈನ್ ಮಾಡಿದ ಉಡುಪುಗಳು ಆಕರ್ಶಕವಾಗಿದ್ದನ್ನು ಗಮನಿಸಿದ ಸ್ನೇಹಿತರು ತಮಗೂ ಅದೇ ರೀತಿಯ ಡಿಸೈನ್ ಉಡುಪುಗಳು ಬೇಕೆಂದು ಡಿಮಾಂಡ್ ಮಾಡಿದರು. ಪ್ರಿಯಾರಿಗೆ ತನ್ನದೇ ಒಂದು ಬ್ರಾಂಡ್ ಆರಂಭಿಸಲು ಅಷ್ಟು ಪ್ರೇರಣೆ ಸಾಕಾಗಿತ್ತು. ಆರಂಬಿಸಿಯೇ ಬಿಟ್ಟರು. ಅದು ಇವತ್ತು ಯಶಸ್ವೀ ಫ್ಯಾಶನ್ ಶೋವರೆಗೂ ಬಂದು ನಿಂತಿದೆ. ಮತ್ತು ಹಲವು ಮಹಿಳೆಯರಿಗೆ ಪ್ರಿಯಾ ಮರಿಯನಾಥನ್ ರೋಲ್‍ಮಾಡೆಲ್ ಆಗಿದ್ದಾರೆ.’ಶೈನ್‍ಟ್ಯಾಗ್’ ಮಾಡೆಲ್‍ಗಳಿಗೆ ರ್ಯಾಂಪ್‍ವಾಕ್ ಮಾತ್ರ ಕಲಿಸದೆ, ಅವರಿಗೆ ವ್ಯಕ್ತಿತ್ವವಿಕಸನ ತರಗತಿಗಳನ್ನು ನಡೆಸುವುದರ ಮೂಲಕ ಇಂದಿನ ಆದುನಿಕ ಜಗತ್ತನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಕೊಡುತ್ತದೆ.  ‘ಶೈನ್‍ಟ್ಯಾಗ್’ ಹಮ್ಮಿಕೊಂಡಿದ್ದ ಮೊದಲ ರನ್‍ವೇಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಾಡೆಲ್‍ಗಳು ಪಾಲ್ಗೊಂಡು ಒಂದು ಯಶಸ್ವೀ ಸಮಾರಂಭವಾಯಿತು.
‘ಶೈನ್‍ಟ್ಯಾಗ್’ ಡಿಸೈನ್ ಉಡುಪುಗಳಿಗೆ ಪುರುಷರ ವಿಭಾಗದಲ್ಲಿ ಬ್ರಾಂಡ್‍ಅಂಬಾಸಿಡರ್ ಆಗಿ ಜೀವನ್ ವಾಸುದೇವನ್ ಆಯ್ಕೆಯಾದರೆ, ಮಹಿಳೆಯರ ವಿಭಾಗದಲ್ಲಿ ಅಸ್ತಾ ಮಹಾಪಾತ್ರ ಆಯ್ಕೆಯಾದರು. ಇನ್ನು ಮಕ್ಕಳ ವಿಭಾಗದಲ್ಲಿ ಶ್ರೇಯಾ ಮತ್ತು ಧ್ರುವ ಬ್ರಾಂಡ್‍ಅಂಬಾಸಿಡರ್ ಆಗಿ ಆಯ್ಕೆಯಾದರು.

ಯಶಸ್ವಿ ಫ್ಯಾಶನ್ ಶೋ ನಡೆಸಿದ ಹುಮ್ಮಸ್ಸಿನಲ್ಲಿರುವ `ಶೈನ್‍ಟ್ಯಾಗ್’ ಸಿ.ಯು.ಓ ಆಗಿರುವ ಪ್ರಿಯಾ ಮರಿಯನಾಥನ್ ಅವರು ಪ್ರತೀ ಮೂರು ತಿಂಗಳಿಗೊಮ್ಮೆ ಇದೇ ರೀತಿಯ ಶೋವನ್ನು ಹಮ್ಮಿಕೊಳ್ಳಲಿದ್ದಾರೆ. ಮೊಂದಿನ ಶೋಗೆ ಸೆಪ್ಟಂಬರ್ ಎರಡನೇ ವಾರದಿಂದ ರಿಜಿಸ್ಟ್ರೇಶನ್ ಆರಂಭವಾಗಲಿದೆ. ಆಸಕ್ತರು `ಶೈನ್‍ಟ್ಯಾಗ್’ ವಬ್‍ಸೈಟ್ ಮೂಲಕ ರಿಜಿಸ್ಟ್ರೇಶನ್ ಮಾಡಬಹುದು.
ಇನ್ನು, `ಶೈನ್‍ಟ್ಯಾಗ್’ ಏರ್ಪಡಿಸಿದ ಬಹು ನಿರೀಕ್ಷಿತ ಫ್ಯಾಶನ್ ಶೋಗೆ ಪ್ರತಿಷ್ಟಿತ ಪಿ.ಎನ್.ಜಿ ಜ್ಯೂವೆಲ್ಸ್ ಇನ್‍ಬ್ರಾಡ್ ಆಗಿ, ಸುಮಾರು ಇಪ್ಪತ್ತು ಕೋಟಿಗೂ ಅಧಿಕ ಮೊತ್ತದ ಆಭರಣಗಳನ್ನು ಈ ಶೋದ ಮೂಲಕ ಪ್ರದರ್ಶಿಸಿತು.

ಒಟ್ಟಿನಲ್ಲಿ, ಪ್ರಿಯಾ ಮರಿಯನಾಥನ್ ಅವರು ತಮ್ಮ `ಶೈನ್‍ಟ್ಯಾಗ್’ ಸಂಸ್ಥೆಯ ಮೂಲಕ, ಕೈಗೆಟಗುವ ಬೆಲೆಯಲ್ಲಿ ಡಿಸೈನರ್ ಉಡುಪುಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಫ್ಯಾಶನ್ ಲೋಕದಲ್ಲೂ ಜನಸಾಮಾನ್ಯರಗಿ ಆದ್ಯತೆ ಕೊಟ್ಟು ಕೆಲಸ ಮಾಡಿರುವವರು ತೀರಾ ವಿರಳ.

Be the first to comment

Leave a Reply

Your email address will not be published. Required fields are marked *

Translate »
error: Content is protected !!