ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ತಮ್ಮ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸಿದ ಮಾಧ್ಯಮ ಸಂಸ್ಥೆ, ವೆಬ್ ಸೈಟ್ ಗಳ ವಿರುದ್ಧ 25 ಕೋಟಿ ರೂಪಾಯಿ ಪರಿಹಾರ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮಾನಹಾನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಬೇಷರತ್ ಕ್ಷಮೆ ಕೇಳಬೇಕು. ಮಾನಹಾನಿಕರ ವಿಷಯಗಳನ್ನು ಡಿಲೀಟ್ ಮಾಡಬೇಕು. 25 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಶಿಲ್ಪಾ ಶೆಟ್ಟಿ ಒತ್ತಾಯಿಸಿದ್ದಾರೆ.
ಫೇಸ್ ಬುಕ್, ಯೂಟ್ಯೂಬ್ ಚಾನೆಲ್ ಗಳು ಸಹ ತಮ್ಮ ವಿರುದ್ಧ ಬರೆದಿರುವ ವಿಷಯವನ್ನು ಡಿಲೀಟ್ ಮಾಡಬೇಕು. ಮಾಧ್ಯಮಗಳು ತನ್ನ ವೈಯುಕ್ತಿಕ ಬದುಕಿನ ಮೇಲೆ ದಾಳಿ ಮಾಡುತ್ತಿವೆ ಎಂದು ಶಿಲ್ಪಾ ಶೆಟ್ಟಿ ಆರೋಪಿಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಮೊಬೈಲ್ ಆ್ಯಪ್ ಮೂಲಕ ಪ್ರಸಾರ ಮಾಡಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದಾರೆ. ಕುಂದ್ರಾ ಅವರನ್ನು ಈಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Actor Shilpa Shetty has filed defamation suit in Bombay High Court against 29 media personnel & media houses for 'doing false reporting & maligning her image' in a pornography case in which her husband Raj Kundra is accused. Hearing in the case scheduled for tomorrow
(File pic) pic.twitter.com/DGTthMEXGi
— ANI (@ANI) July 29, 2021
Be the first to comment