ಶೀರ್ಷಿಕೆಯಿಂದಲೇ ಗಮನ ಸೆಳೆಯುವಂಥ ಚಿತ್ರ ‘ಶಿಖಂಡಿ’ಯ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಖ್ಯಾತ ನಿರ್ದೇಶಕ, ಬರಹಗಾರ ಜಡೇಶ್ ಕುಮಾರ್ ಹಂಪಿ ಮತ್ತು ಸಂಜಯ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
ಚಿತ್ರದ ನಿರ್ದೇಶಕ ಗುರುಮೂರ್ತಿ ಮಾತನಾಡಿ “ಈ ಶೀರ್ಷಿಕೆಗೆ ಮಹಾಭಾರತದ ಶಿಖಂಡಿಯ ಹೆಸರೇ ಸ್ಫೂರ್ತಿ. ಚಿತ್ರದಲ್ಲಿ ನಾಯಕ ಮೊದಲು ಶಿಖಂಡಿಯಾಗಿ, ಬಳಿಕ ಶಿವನಾಗಿ ಅರ್ಧಾಂಗಿಯಾಗಿ, ಮತ್ತು ಕೊನೆಗೆ ಎಲ್ಲವ್ವನ ರೂಪದಲ್ಲಿ ಜೋಗತಿಯಾಗುವ ಕಥೆಯನ್ನು ಹೇಳ ಹೊರಟಿದ್ದೇನೆ” ಎಂದು ಕುತೂಹಲ ಮೂಡಿಸಿದ್ದಾರೆ.
ಇಲ್ಲಿ ಶಿಖಂಡಿ ಅಂದರೆ ದೈವ ಸ್ವರೂಪಿ ಶಕ್ತಿ ಎಂದಿರುವ ನಿರ್ದೇಶಕರು ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿದೆ ಎಂದು ಖುಷಿ ಹಂಚಿಕೊಂಡರು.
ಚಿತ್ರದ ನಾಯಕಿ ಖ್ಯಾತಿ ಮಾತನಾಡಿ “ತಾವು ಸಂಗೀತ ಎನ್ನುವ ವೈದ್ಯೆಯ ಪಾತ್ರ ಮಾಡಿರುವುದಾಗಿ” ಹೇಳಿದರು. ಆಸ್ಪತ್ರೆ ಕಟ್ಟುವ ಕನಸಿರುವ ಡಾಕ್ಟರ್ ಪಾತ್ರ. ಕನಸು ನನಸಾಗಿಸುವ ಪ್ರಯತ್ನದಲ್ಲಿನ ಸಮಸ್ಯೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಚಿತ್ರದ ನಾಯಕ ಯುವರಾಜ್ ಗೌಡ ತಮ್ಮದು ಮೂಲತಃ ಮೈಸೂರು ಎಂದರು.

ಕಲಾವಿದ ರಘು ರಾಮನ ಕೊಪ್ಪ ಅವರು ಮಾತನಾಡಿ ನಿರೂಪಕಿ ಅತಿಥಿಗಳ ಹೆಸರನ್ನು ತಪ್ಪಾಗಿ ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ತಾವು ಈ ಚಿತ್ರದಲ್ಲಿ ಎಮ್.ಡಿ ಪಾತ್ರ ಮಾಡಿರುವುದಾಗಿ ಹೇಳಿದರು. ರಘು ರಾಮನಕೊಪ್ಪ ಅವರು ಎಮ್.ಡಿಯಾದರೆ ಅವರ ಬಳಿ ಕೆಲಸ ಮಾಡುವ ನೌಕರನ ಪಾತ್ರ ನನ್ನದು ಎಂದು ವಿಜಯ್ ಚೆಂಡೂರ್ ಹೇಳಿದರು. ಬಹುಭಾಷಾ ನಟ ರಾಜ್ ದೀಪಕ್ ಶೆಟ್ಟಿ ಕೂಡ ತಮ್ಮ ಪಾತ್ರದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.






Be the first to comment