ಸೆಟ್ಟೇರಿತು ರಾಜು ಜೇಮ್ಸ್ ಬಾಂಡ್
ಕರ್ಮ ಬ್ರದರ್ಸ್ ಪೆÇ್ರಡಕ್ಷನ್ ಅಡಿಯಲ್ಲಿ ಕಳೆದ ವಾರ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ಹೆಚ್ಚುವರಿ ವಿಧ್ಯಮಂತ್ರಿ ಜಿ ಟಿ ದೇವೇ ಗೌಡ ಅವರು ಕ್ಯಾಮರಾ ಸ್ವಿಚ್ ಆನ್ ಮಾಡುವುದರ ಮುಖಾಂತರ ಸೆಟ್ಟೇರಿತು.
ರಾಜು ಹೆಸರಿಗೆ ಬ್ರಾಂಡ್ ಆಗಿರುವ ಗುರುನಂದನ್ ಈಗ ಜೇಮ್ಸ್ ಬಾಂಡ್ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ. ರಾಜು ಜೇಮ್ಸ್ ಬಾಂಡ್ ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ. ಈತ ತನ್ನ ಜೀವನದಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಹೇಗೆ ಬಾಂಡ್ ಶೈಲಿ ಬಳಸಿ ಕಾರ್ಯ ನಿರ್ವಹಿಸುತ್ತಾನೆ ಎಂಬುದು ಕಥಾ ಹಂದರ. ದೀಪಕ್ ಮದುವನಹಳ್ಳಿ ಈ ಹಿಂದೆ `ಭಾಗ್ಯರಾಜ್ ಹಾಗೂ ಕಲ್ಬೆಟ್ಟದ ದರೋಡೆಕೊರರು’ ಸಿನಿಮಗಳ ನಿರ್ದೇಶನ ಮಾಡಿದವರು. ರಾಜು ಒಂದು ಪಟ್ಟಣದಲಿ ವಾಸಿಸಿರುವ ಹುಡುಗ. ಅವನಿಗೆ ತಂದೆ ತಾಯಿ ಇಲ್ಲ. ಅವನ ಮಾವನೇ ಅವನಿಗೆ ಎಲ್ಲ. ಇವನು ಸಾಲದಲ್ಲಿ ಇರುವ ಜಪ್ತಿ ಆಗಿರುವ ಮನೆಯನ್ನು ಬಿಡಿಸಿಕೊಳ್ಳಬೇಕು. ಇದು ಅವನ ತಾಯಿಯ ಮನೆ. ಇದರ ಜೊತೆಗೆ ಊರಿನ ಮುಖ್ಯಸ್ಥನ ಮಗಳು ವಿಧ್ಯ ಅವನ ಪ್ರೇಯಸಿ. ಮಾವನ ಅಂಗಡಿಯಲ್ಲಿ ಇವನ ಕೆಲಸ. ಬ್ಯಾಂಕಿನ ಅಧಿಕಾರಿಗಳು ನಾಯಕನ ಮನೆಯನ್ನು ಜಪ್ತಿ ಮಾಡಿ ಹರಾಜಿಗೆ ಇಡುತ್ತಾರೆ. ಮತ್ತೊಂದು ಕಡೆ ಅವನ ಪ್ರೇಯಸಿ ವಿಧ್ಯ ಮದುವೆ ಸಹ ಇನ್ನೊಂದು ಕಡೆ ನಡೆಯುತ್ತಿರುತ್ತದೆ. ಈ ಎರಡು ಪರಿಸ್ಥಿತಿಯನ್ನು ರಾಜು ಹೇಗೆ ನಿಭಾಯಿಸುತ್ತಾನೆ ಈ `ರಾಜು ಜೇಮ್ಸ್ ಬಾಂಡ್’ ಚಿತ್ರದ ಹೂರಣ.
ಚಿತ್ರಕಥೆ ಹಾಗೂ ಸಂಭಾಷಣೆ ಜಗದೀಶ್ ನಡನಲ್ಲಿ, ಸನ ನಿರ್ದೇಶನ ಶಿವರಾಜ್, ಛಾಯಾಗ್ರಹಣ ಮನೋಹರ್ ಜೋಷಿ, ಸಂಗೀತ ಅನೂಪ್ ಸೀಳಿನ್ ಜೆ, ಸಂಕಲನ ಅಕ್ಷಯ್ ಪಿ ರಾವ್, ನಿರ್ಮಾಣ ಕರ್ಮ ಬ್ರದರ್ಸ್ ಪೆÇ್ರಡಕ್ಷನ್, ನಿರ್ಮಾಪಕರು ಕಿರಣ್ ಬರ್ಥೂರ್ (ಕೆನಡಾ) ಮಂಜುನಾಥ್ ವಿಶ್ವಕರ್ಮ (ಲಂಡನ್), ಕಲಾ ನಿರ್ದೇಶನ ಮೊಹನ್ ಪಂಡಿತ್, ವಸ್ತ್ರ ವಿನ್ಯಾಸ ಶ್ಲೋಕ ಸುಧಾಕರ್, ಕಾರ್ಯಕಾರಿ ನಿರ್ಮಾಪಕರು ಎಲ್ ಎಲ್ ಕೆ ನಾಯ್ಡು, ಕಾರ್ಯಕಾರಿ ನಿರ್ಮಾಪಕ ಪ್ರವೀಣ್ ಆತ್ರೇಯಸ್, ನಿರ್ದೇಶನ ದೀಪಕ್ ಮಧುವನಹಳ್ಳಿ.
ನಾಯಕ ಗುರುನಂದನ್ ಜೊತೆ ನಾಯಕಿ ಆಗಿ ಮೃದುಲ, ರಾಗಾಯನ ರಘು, ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ, ಸುಂದರ್ ವೀಣ ಹಾಗೂ ಇತರರು ಇದ್ದಾರೆ.
Pingback: plumbing company Beaufort NC