ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಜುಲೈ 12ಕ್ಕೆ ರೀ-ರಿಲೀಸ್ ಮಾಡಲು ತಯಾರಿ ನಡೆದಿದೆ.
ವಿತಕರ ವಿ.ಎಂ. ಶಂಕರ್ ಅವರು ಈ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿದ್ದಾರೆ. ಇದು ಸಡನ್ ಪ್ಲ್ಯಾನ್ ಅಲ್ಲ. ದರ್ಶನ್ ಜೈಲಿಗೆ ಹೋಗಿದ್ದಕ್ಕೂ ‘ಶಾಸ್ತ್ರಿ’ ಮರು ಬಿಡುಗಡೆ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಂಕರ್ ಹೇಳಿದ್ದಾರೆ.
”ಈ ವಾರ ಕನ್ನಡದ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಚಿತ್ರಮಂದಿರದ ಮಾಲೀಕರು ರೀ-ರಿಲೀಸ್ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 25ರಿಂದ 50 ಚಿತ್ರಮಂದಿರಗಳಲ್ಲಿ ‘ಶಾಸ್ತ್ರಿ’ ಸಿನಿಮಾ ಬಿಡುಗಡೆ ಮಾಡುತ್ತೇವೆ. ಗಲಭೆ ಆಗಬಹುದು ಅಂತ ಕೆಲವು ಚಿತ್ರಮಂದಿರದ ಮಾಲಿಕರು ಯೋಚನೆ ಮಾಡುತ್ತಿದ್ದಾರೆ” ಎಂದು ಶಂಕರ್ ಹೇಳಿದ್ದಾರೆ.
ಶಾಸ್ತ್ರಿ ಚಿತ್ರ 2005ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ಪಿ ಎನ್ ಸತ್ಯ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ದರ್ಶನ್ ಜೊತೆಗೆ ಮಾನ್ಯ, ಬುಲೆಟ್ ಪ್ರಕಾಶ್ ನಟಿಸಿದ್ದರು. ಶಾಸ್ತ್ರಿ ಚಿತ್ರ ಚಿತ್ರ ಮಂದಿರಗಳಲ್ಲಿ ಯಶಸ್ವಿ ಎನಿಸಿತ್ತು.
Be the first to comment