ಬಿಗ್‍ಬಾಸ್ ವಿನ್ನರ್ ಶಶಿಕುಮಾರ್ ಈಗ ಬಣ್ಣದ ಲೋಕದಲ್ಲಿ ಮಿಂಚಲು ಹೊರಟಿದ್ದಾರೆ. ವಿಭಿನ್ನ ಪ್ರೇಮಕಥೆ ಹೊಂದಿರುವ ಮೆಹಬೂಬಾ ಚಿತ್ರದಲ್ಲಿ ಶಶಿಗೆ ನಾಯಕಿಯಾಗಿ ಪಾವನಾಗೌಡ ಬಣ್ಣ ಹಚ್ಚಿದ್ದಾರೆ. ಮೊನ್ನೆ ಈ ಚಿತ್ರದ ಮುಹೂರ್ತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅನೂಪ್ ನಿರ್ದೇಶಿಸಿರುವ ಮೆಹಬೂಬಾ ಚಿತ್ರವನ್ನು ಬ್ಯೂಟಿಫುಲ್ ಮನಸುಗಳು, ನೀರ್‍ದೋಸೆ ಚಿತ್ರಗಳನ್ನು ನಿರ್ಮಿಸಿದ್ದ ಪ್ರಸನ್ನ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
2015 ರಲ್ಲಿ ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧಾರಿಸಿ ನಿರ್ಮಾಣವಾಗುತ್ತಿರುವ ಮೆಹಬೂಬಾ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಬೇರೆ ಬೇರೆ ಧರ್ಮದವರಾಗಿದ್ದು ಅವರಿಬ್ಬರ ನಡುವೆ ಪ್ರೇಮಾಂಕುರವದಾಗ ಏನಾಗುತ್ತದೆ ಎಂಬುದನ್ನು ನಿರ್ದೇಶಕ ಅನೂಪ್ ಪ್ರಯೋಗಾತ್ಮಕವಾಗಿ ಹೇಳಲು ಹೊರಟಿದ್ದಾರೆ.
ನಿರ್ದೇಶಕ ಅನೂಪ್ ಮಾತನಾಡಿ, ನಾನು ಈ ಹಿಂದೆ ಕಥಾವಿಚಿತ್ರ ಎಂಬ ಚಿತ್ರವನ್ನು ಮಾಡುವಾಗಲೇ ನನಗೆ ಈ ಚಿತ್ರದ ಕಥೆ ಹೊಳೆಯಿತು, ಅದನ್ನು ನಿರ್ಮಾಪಕ ಪ್ರಸನ್ನಗೆ ಹೇಳಿದಾಗ ಅವರು ಈ ಚಿತ್ರವನ್ನು ಹೊಸಬರನ್ನು ಹಾಕಿಕೊಂಡೇ ಮಾಡೋಣ ಎಂದು ತಿರ್ಮಾನಿಸಿ ಬಿಗ್‍ಬಾಸ್ ವಿಜೇತ ಶಶಿ ಅವರನ್ನು ಚಿತ್ರದ ನಾಯಕನಾಗಿ ಆಯ್ಕೆ ಮಾಡಿಕೊಂಡು ಅವರಿಗೆ ತಿಳಿಸಿದಾಗ ಸಂತೋಷದಿಂದ ನಟಿಸಲು ಒಪ್ಪಿಕೊಂಡರು.
ಈ ಚಿತ್ರದಲ್ಲಿ ರೊಮಾನ್ಸ್ ಹೆಚ್ಚಾಗಿರುವುದರಿಂದ ಅದಕ್ಕೆ ಹೊಂದಿಕೆಯಾಗುವಂತಹ ಪಾವನಾ ಅವರನ್ನು ಆಯ್ಕೆ ಮಾಡಿದ್ದೀವಿ. ಸೆಕೆಂಡ್ ಜನವರಿಯಿಂದ ಚಿತ್ರೀಕರಣವನ್ನು ಶುರು ಮಾಡಲಿದ್ದು ಮೈಸೂರು, ಬೆಂಗಳೂರಿನಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಮಾಡುತ್ತೇವೆ ಎಂದು ಹೇಳಿದರು.
ನಿರ್ಮಾಪಕ ಪ್ರಸನ್ನ ಮಾತನಾಡಿ, ನಮ್ಮ ನಿರ್ಮಾಣ ಸಂಸ್ಥೆಯಿಂದ ಹೊರಬಂದ ನೀರ್‍ದೋಸೆ, ಬ್ಯೂಟಿಫುಲ್ ಮನಸ್ಸುಗಳು ಸಕ್ಸಸ್ ಆಗಿದ್ದು, ಈಗ ಪರಿಮಳಾಲಾಡ್ಜ್ ಚಿತ್ರವನ್ನು ಮಾಡುತ್ತಿದ್ದೆವೆ, ಈಗ ಮೆಹಬೂಬಾ ಚಿತ್ರಕ್ಕೆ ಕೈ ಹಾಕಿದ್ದೇವೆ, ನಿರ್ದೇಶಕ ಅನೂಪ್ ಹೇಳಿದ ಕಥೆ ತುಂಬಾ ಹಿಡಿಸಿ ನಿರ್ಮಾಣಕ್ಕೆ ಮುಂದಾದೆವು. ಇದು ಒಂದು ಭಾವುಕತೆವುಳ್ಳ ಸಿನಿಮಾ. ನಾವು ಈ ಚಿತ್ರದಲ್ಲಿ ಯಾವುದೇ ಧರ್ಮದ ಕುರಿತು ಚರ್ಚೆ ಮಾಡುವುದಿಲ್ಲ. ಇಂದಿನ ದಿನದಲ್ಲಿವಾಸ್ತವವಾಗಿ ನಡೆಯತ್ತಿದಿಯೋ ಅದನ್ನ ಈ ಸಿನಿಮಾದಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ ಎಂದಿದ್ದಾರೆ ಪ್ರಸನ್ನ.
ನಟ ಶಶಿಕುಮಾರ್ ಮಾತನಾಡಿ, ಬಿಗ್‍ಬಾಸ್ ವಿಜೇತನಾದ ನಂತರ ನನಗೆ ಬಹಳಷ್ಟು ನಿರ್ದೇಶಕರು ಕಥೆಗಳನ್ನು ಹೇಳಿದರು ಅದರೆ ಯಾವುದು ನನಗೆ ಇಷ್ಟವಾಗಲಿಲ್ಲ, ಆದರೆ ಅನೂಪ್ ಹೇಳಿದ ಕಥೆ ಹಿಡಿಸಿದ್ದರಿಂದ ನಟಿಸಲು ಒಪ್ಪಿದೆ, ಈ ಚಿತ್ರದಲ್ಲಿ ದೊಡ್ಡ ಮನೆತನದ ಹುಡುಗನಾಗಿ ಕಾಣಿಸಿಕೊಂಡಿz್ದÉೀನೆ ಎಂದು ಹೇಳಿದರು.
ನಾಯಕಿ ಪಾವನಾಗೌಡ ಮಾತನಾಡಿ, ಈ ಚಿತ್ರದಲ್ಲಿ ನಾನು ಬಡ ಕುಟುಂಬದ ಹೆಣ್ಣಾಗಿ ಕಾಣಿಸಿಕೊಂಡಿದ್ದೇನೆ, ಜಾತಿ, ಧರ್ಮ ಮತಗಳನ್ನು ಮೀರಿ ಪ್ರೀತಿ ಹುಟ್ಟಿದಾಗ ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಕಥೆ ಎಂದು ಹೇಳಿದರು.
ಈ ಚಿತ್ರಕ್ಕೆ ಮ್ಯಾಥ್ಯೂ ಮನು ಸಂಗೀತ ಸಂಯೋಜಿಸಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಅವರ ಪ್ರಕಾಶ್ ಸಂಕಲನವಿದೆ. ಬುಲೆಟ್ ಪ್ರಕಾಶ್, ಜೈಜಗದೀಶ್, ಕಬೀರ್ ಸಿಂಗ್ ಸೇರಿದಂತೆ ಇತರರು ನಟಿಸಿದ್ದಾರೆ. ಬಿಗ್‍ಬಾಸ್ ಮೂಲಕ ಒಂದು ಐಡೆಂಟಿಟಿ ಪಡೆದುಕೊಂಡಿರುವ ಶಶಿಕುಮಾರ್ ಮೆಹಬೂಬಾ ಚಿತ್ರದ ಮೂಲಕ ಒಬ್ಬ ನಟನಾಗಿ ರೂಪುಗೊಳ್ಳಲಿ.
Pingback: What is DevSecOps
Pingback: maine cornhole