ನಿರ್ದೇಶಕ ಶಶಾಂಕ್ ನಟ ಡಾರ್ಲಿಂಗ್ ಕೃಷ್ಣ ಅವರಿಗೆ ಮತ್ತೊಮ್ಮೆ ಆಕ್ಷನ್ ಕಟ್ ಹೇಳಲಿದ್ದಾರೆ.
‘ಡಾರ್ಲಿಂಗ್ ಕೃಷ್ಣ ಜೊತೆ ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬಳಿಕ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ ನಿರ್ದೇಶಕ ಶಶಾಂಕ್.
‘ನಮ್ಮ ಮೊದಲ ಸಿನಿಮಾಗೆ ಪ್ರೇಕ್ಷಕರು ತೋರಿದ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ಇದೀಗ ನಾವು ಮತ್ತೆ ಹೊಸ ಸಿನಿಮಾದೊಂದಿಗೆ ಬರುತ್ತಿದ್ದೇವೆ’ ಎಂದಿದ್ದಾರೆ ಶಶಾಂಕ್.
‘ಮೊಗ್ಗಿನ ಮನಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣ ಲೀಲಾ’, ‘ಲವ್ 360’ ಹೀಗೆ ಪ್ರೇಮಕಥೆಗಳನ್ನು ತೆರೆಯ ಮೇಲೆ ಹೊತ್ತು ತಂದಿದ್ದ ನಿರ್ದೇಶಕ ಶಶಾಂಕ್, ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಹೊಸ ಬಗೆಯ ಕಥೆಯೊಂದನ್ನು ಪ್ರೇಕ್ಷಕರ ಎದುರಿಗೆ ಇರಿಸಿದ್ದರು. ಇದು ಪ್ರೇಕ್ಷಕರನ್ನು ಸೆಳೆದಿತ್ತು.
ಡಾರ್ಲಿಂಗ್ ಕೃಷ್ಣ ಅವರು ‘ಆರ್.ಸಿ. ಸ್ಟುಡಿಯೊಸ್’ನಡಿ ನಿರ್ದೇಶಕ ಆರ್.ಚಂದ್ರು ನಿರ್ಮಾಣ, ರಾಜ್ ಮೋಹನ್ ಆಕ್ಷನ್ ಕಟ್ ಹೇಳುತ್ತಿರುವ ‘ಫಾದರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
Be the first to comment