ಶಾರೂಖ್ ಅತ್ಯಂತ ಬೇಡಿಕೆಯ ನಟ

ವಿಶ್ವದಲ್ಲೇ ಅತ್ಯಂತ ಬೇಡಿಕೆ ಇರುವ ಸಿನೆಮಾ ತಾರೆಯರ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಕಂಟೆಂಟ್ ಡಿಮ್ಯಾಂಡ್ ಅನಾಲಿಟಿಕ್ಸ್ ಕಂಪನಿ ಜುಲೈ 20 ರಿಂದ ಆಗಸ್ಟ್ 18 ರವರೆಗೆ ಈ ಸಮೀಕ್ಷೆ ನಡೆಸಿದೆ. ಶಾರೂಖ್ ನಂತರದ ಸ್ಥಾನದಲ್ಲಿ ತೆಲುಗು ನಟ ಅಲ್ಲು ಅರ್ಜುನ್, ಬಾಲಿವುಡ್, ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದ್ದಾರೆ.
ಪಟ್ಟಿಯಲ್ಲಿ ತಮಿಳು ನಟ ಧನುಶ್ ಐದನೇ ಸ್ಥಾನ, ಆರನೇ ಸ್ಥಾನದಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್, ಏಳನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ. ತೆಲುಗು ನಟ ಮಹೇಶ್ ಬಾಬು ಎಂಟನೇ ಸ್ಥಾನ, ಬಾಲಿವುಡ್ ನಟಿ ಕಿಯರಾ ಅಡ್ವಾಣಿ ಅವರು 10ನೇ ಸ್ಥಾನ ಪಡೆದಿದ್ದಾರೆ.

ವಿಶ್ವಾದ್ಯಂತ ಹೆಚ್ಚು ಬೇಡಿಕೆಯಿರುವ 10 ತಾರೆಯರ ಪಟ್ಟಿಯಲ್ಲಿ ಭಾರತೀಯ ನಟರೇ ಹೆಚ್ಚು ಪಾರಮ್ಯ ಮೆರೆದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿರುವ ಶಾರುಖ್ ಅವರ ಚಿತ್ರಗಳು ಕಳೆದ ಮೂರು ವರ್ಷಗಳಿಂದ ಬಿಡುಗಡೆ ಆಗಿಲ್ಲ. 2018ರಲ್ಲಿ ತೆರೆಕಂಡ ‘ಜೀರೋ’ ಚಿತ್ರ ಬಿಡುಗಡೆ ಆದ ಕೊನೆಯ ಚಿತ್ರ. ಆದರೂ ಶಾರುಖ್ ವಿಶ್ವದ ಹೆಚ್ಚು ಬೇಡಿಕೆಯ ನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

ಅಂತೆಯೇ ಕಬೀರ್ ಖಾನ್ ಚಿತ್ರದ ನಟಿ ಕಿಯರಾ ಅಡ್ವಾಣಿ ಹೆಸರು ಪಟ್ಟಿಯಲ್ಲಿ ಇರುವುದು ಅಚ್ಚರಿಗೆ ಕಾರಣ ಆಗಿದೆ. ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಸನ್ನಿ ಲಿಯೋನ್ ಅವರಂಥ ಪ್ರಭಾವಿ ನಟಿಯರ ಮಧ್ಯೆ ಕಿಯಾರಾ ಜಾಗತಿಕ ಸಮೀಕ್ಷೆಯಲ್ಲಿ 10ನೆಯ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!