ಕನ್ನಡದ ನಟಿ ಪ್ರಿಯಾಮಣಿ ಅವರು ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ ಹಿಂದಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರ ಮಾಡಲಿದ್ದಾರೆ. ಚಿತ್ರಕ್ಕೆ ಇಬ್ಬರು ನಾಯಕಿಯರು ಇದ್ದು ನಯನತಾರಾ ಅಲ್ಲದೇ ಇನ್ನೊಂದು ನಾಯಕಿ ಪಾತ್ರದಲ್ಲಿ ಪ್ರಿಯಾಮಣಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಶಾರುಖ್ ಖಾನ್ ಹಾಗೂ ನಯನತಾರಾ ಪುಣೆಯಲ್ಲಿ ನಡೆಯುವ ಚಿತ್ರೀಕರಣದ ಮೊದಲ ಶೆಡ್ಯೂಲ್ ನಲ್ಲಿ ಭಾಗಿ ಆಗಲಿದ್ದಾರೆ. ಕೆಲವು ದಿನಗಳ ಬಳಿಕ ಪ್ರಿಯಾಮಣಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಪ್ರಿಯಾಮಣಿ ಅವರು ಈ ಹಿಂದೆ ಶಾರುಖ್ ಖಾನ್ ನಟಿಸಿದ್ದ ‘ಚೆನ್ನೈ ಎಕ್ಸ್‌ಪ್ರೆಸ್’ನಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಈಗ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಗಮನಾರ್ಹ ಆಗಿದೆ.
ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಏಳು ತಿಂಗಳ ಅವಧಿಯಲ್ಲಿ ಸಿನಿಮಾವನ್ನು ಮುಗಿಸುವ ಯೋಜನೆಯನ್ನು ನಿರ್ದೇಶಕ ಅಟ್ಲಿ ಹಾಕಿಕೊಂಡಿದ್ದಾರೆ.
ಪ್ರಿಯಾಮಣಿ ನಟನೆಯ ‘ನಾರಪ್ಪ’ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದೆ. ಇವರು ಮುಖ್ಯ ಪಾತ್ರದಲ್ಲಿ ಇರುವ ತೆಲುಗಿನ ‘ವಿರಾಟಪರ್ವಂ’, ತಮಿಳಿನ ‘ತಲೈವಿ’ ರಿಲೀಸ್ ಗೆ ಕಾಯುತ್ತಿದೆ.
ಅಲ್ಲದೇ ಪ್ರಿಯಾಮಣಿ ತಮಿಳಿನ ‘ಸೈನೈಡ್’, ಕನ್ನಡದ ‘ಖೈಮರಾ’, ‘ವ್ಯೂಹ’, ಮಲಯಾಳಂನ ‘ಪಪ್ಪಾ’, ‘ಸಿರಿ ವೆನ್ನೆಲ’, ‘ಅಂಗುಲಿಕ’, ‘ಸೈಲೆಂಟ್ ರೇಡಿಯೊ’, ‘ಕಾದಲ್ ಮುದಿಚು’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
____________





Be the first to comment