‘ಜೈಲರ್ 2’ ನಲ್ಲಿ ರಜನಿಕಾಂತ್ ಜೊತೆ ಶಾರುಖ್ ಖಾನ್, ರಜನಿಕಾಂತ್, ಶಿವರಾಜ್ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ.
ರಜನಿಕಾಂತ್-ನೆಲ್ಸನ್ ಕಾಂಬಿನೇಷನ್‌ನ ಜೈಲರ್ ಮೊದಲ ಭಾಗದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ತೆರೆ ಮೇಲೆ ಬರಲಿದ್ದಾರೆ. ‘ಜೈಲರ್ 2’ ನಲ್ಲಿ ರಜನಿ ಜೊತೆ ಭಾರತೀಯ ಚಿತ್ರರಂಗದ ಘಟಾನುಘಟಿ ನಟರು ಸೇರಲಿದ್ದಾರೆ ಎಂಬ ಸುದ್ದಿ ಮೊದಲಿನಿಂದ ಇತ್ತು.
‘ಜೈಲರ್’ ಮೊದಲ ಭಾಗದಲ್ಲಿ ಮೋಹನ್‌ಲಾಲ್‌ಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದ ಜಿಶಾದ್ ಶಂಸುದ್ದೀನ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.
ಶಾರುಖ್ ಖಾನ್ ನಿರ್ಮಿಸಿ ನಟಿಸಿದ್ದ ರಾ ಒನ್ ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಜೈಲರ್ 2 ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವುದಾಗಿ ಮಾಹಿತಿ ಹೊರಬಂದಿದೆ.
ಜೈಲರ್ 2 ಚಿತ್ರ ತಂಡ ಇನ್ನೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆಗಸ್ಟ್ ಆಸುಪಾಸಿನಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ವಿಜಯ್ ಸೇತುಪತಿ, ಸೂರಜ್ ವೆಂಜರಮೂಡು ಮತ್ತು ಇತರ ನಟರು ಚಿತ್ರಕ್ಕೆ ಸೇರಲಿದ್ದು, ರಜನಿಕಾಂತ್ ಅವರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಜೈಲರ್ 2 ಒಂದಾಗಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಿದ ಬಳಿಕ ಮಲ್ಟಿಸ್ಟಾರರ್ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಯಾವಾಗಲೂ ಒಲವು ಜಾಸ್ತಿ ಆಗಿದೆ.
—–





Be the first to comment