ಜೂ. ಎನ್​ಟಿಆರ್ ಸಿನಿಮಾದಲ್ಲಿ ಶಾರುಖ್

ಅಯನ್ ಮುಖರ್ಜಿ ನಿರ್ದೇಶನದ ‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಜೊತೆ ಶಾರುಖ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

‘ವಾರ್​’ ಸಿನಿಮಾದ ಯಶಸ್ಸಿನ ಬಳಿಕ ಯಶ್ ರಾಜ್ ಫಿಲಂಸ್ ನಿರ್ಮಾಣ ಸಂಸ್ಥೆ ‘ವಾರ್ 2’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.  ವಾರ್ 2 ಸಿನಿಮಾದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್​ಟಿಆರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದು, ಆಯಕ್ಷನ್ ಸೀನ್ ಗಳ ಶೂಟಿಂಗ್  ನಡೆಯುತ್ತಿದೆ. ಜೂನಿಯರ್ ಎನ್ ಟಿಆರ್ 40ಕ್ಕೂ ಹೆಚ್ಚು ಜನರೊಂದಿಗೆ ಫೈಟ್ ಮಾಡುವ ದೃಶ್ಯ ಈ ಚಿತ್ರದಲ್ಲಿದೆ. ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಾರ್2​ ಸಿನಿಮಾದಲ್ಲಿ ಹೃತಿಕ್ ರೋಷನ್​ ಪಾತ್ರ  ಹೈಲೈಟ್ ಆಗಿದೆ. ಜೂನಿಯರ್ ಎನ್ ಟಿಆರ್ ಪಾತ್ರಕ್ಕೂ ಹೆಚ್ಚು ಒತ್ತು ನೀಡಲಾಗಿದೆ.

ವಾರ್ 2 ಸಿನಿಮಾದಲ್ಲಿ ತಾರಕ್ ಪಾತ್ರ  ಹೈಲೈಟ್ ಆಗಲಿದೆ ಎನ್ನಲಾಗಿದೆ. ತಾರಕ್ ಪಾತ್ರವನ್ನು ಸಂಪೂರ್ಣವಾಗಿ ರಾ ಪಾತ್ರದಲ್ಲಿ ತೋರಿಸಲಿದ್ದಾರೆ ಎಂದು ಚಿತ್ರತಂಡದಿಂದ ಮಾಹಿತಿ ಹೊರ ಬಿದ್ದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!