ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ 17 ವರ್ಷಗಳ ಬಳಿಕ ದರ್ಶನ್ ಜೊತೆ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶರ್ಮಿಳಾ ಮಾಂಡ್ರೆ, ‘ಬಹಳ ವರ್ಷಗಳ ಬಳಿಕ ನಾನು ದರ್ಶನ್ ಅವರೊಟ್ಟಿಗೆ ನಟಿಸುತ್ತಿದ್ದೇನೆ. ‘ನವಗ್ರಹ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಒಳ್ಳೆಯ ಗೆಳೆತನ ಇತ್ತು, ಅದೇ ಈಗಲೂ ಮುಂದುವರೆದಿದೆ’ ಎಂದಿದ್ದಾರೆ.
‘ನಾನು ಮಿಲನಾ ಪ್ರಕಾಶ್ ಅವರ ಅಭಿಮಾನಿ. ಹಲವು ವರ್ಷಗಳಿಂದಲೂ ಅವರ ಸಿನಿಮಾ ನೋಡುತ್ತಾ ಬಂದಿದ್ದೇನೆ. ಅವರ ಜೊತೆ ಕೆಲಸ ಮಾಡುವ ಆಸೆಯಿತ್ತು, ಅದು ಈಗ ‘ದಿ ಡೆವಿಲ್’ ಸಿನಿಮಾ ಮೂಲಕ ಈಡೇರುತ್ತಿದೆ’ ಎಂದಿದ್ದಾರೆ ಶರ್ಮಿಳಾ.
‘ದಿ ಡೆವಿಲ್’ ಸಿನಿಮಾದಲ್ಲಿ ನನ್ನ ಪಾತ್ರ ವಿಶಿಷ್ಠ. ಈಗಾಗಲೇ ನನ್ನ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯಗಳು ಹರಿದಾಡುತ್ತಿವೆ. ಆದರೆ ಅವೆಲ್ಲವೂ ಸುಳ್ಳಾಗಿವೆ. ಸಿನಿಮಾ ಬಿಡುಗಡೆ ಆದಾಗ ನನ್ನ ಪಾತ್ರದ ವಿಶೇಷತೆ ತಿಳಿಯಲಿದೆ. ಸದ್ಯಕ್ಕೆ ಅದು ಗುಟ್ಟು’ ಎಂದಿದ್ದಾರೆ.
‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಕೆಲ ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎನ್ನಲಾಗುತ್ತಿದೆ. ಸಿನಿಮಾದ ಡಬ್ಬಿಂಗ್ ಕಾರ್ಯವೂ ಚಾಲ್ತಿಯಲ್ಲಿದೆ. ಸಿನಿಮಾದ ಟೀಸರ್ ನ್ನು ಕೆಲವೇ ದಿನಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಲಿದೆ. ಬಳಿಕ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಲಿದೆ.
—

Be the first to comment