ಬಹುಭಾಷಾ ನಟ ಶರತ್ ಬಾಬು ನಿಧನರಾಗಿಲ್ಲ. ಇದು ಸುಳ್ಳು ಸುದ್ದಿ. ಇದನ್ನು ಯಾರೂ ನಂಬಬೇಡಿ ಎಂದು ಕುಟುಂಬಸ್ಥರು ವಿನಂತಿ ಮಾಡಿದ್ದಾರೆ.
ಶರತ್ ಬಾಬು ನಿಧನರಾಗಿದ್ದಾರೆ ಎಂಬ ಸುದ್ದಿ ನಿನ್ನೆ ರಾತ್ರಿಯಿಂದ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನೋಡಿದ ಕೆಲ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಇದರಿಂದ ಅಭಿಮಾನಿಗಳು ದಿಢೀರ್ ಆಘಾತಗೊಳಗಾಗಿದ್ದಾರೆ.
ಶರತ್ ಬಾಬು ಸಹೋದರಿ ಈ ಬಗ್ಗೆ ಮಾಹಿತಿ ನೀಡಿದ್ದು,ಶರತ್ ಬಾಬು ಮೊದಲಿಗಿಂತ ಕೊಂಚ ಚೇತರಿಸಿಕೊಂಡಿದ್ದಾರೆ. ವರು ಸಂಪೂರ್ಣ ಗುಣಮುಖರಾಗಿ ಅವರಾಗಿಯೇ ಮಾಧ್ಯಮದ ಜೊತೆ ಮಾತನಾಡಲಿದ್ದಾರೆ ಎಂದಿದ್ದಾರೆ.
ಶರತ್ ಆರೋಗ್ಯ ಚಿಂತಾಜನಕ: ಆದರೆ ಶರತ್ ಬಾಬು ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಗಚಿಬೌಲಿಯ ಎಐಜಿ ಆಸ್ಪತ್ರೆ ಬುಧವಾರ ರಾತ್ರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಶೇಷ ವೈದ್ಯಕೀಯ ತಂಡ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದೆ ಎನ್ನಲಾಗಿದೆ. ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಚಿತ್ರರಂಗದ ಹಿರಿಯ ನಟ ಶರತ್ ಬಾಬು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಸುಮಾರು 200 ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕನಾಗಿ, ಖಳನಟನಾಗಿ, ಪೋಷಕ ನಟ ಆಗಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಇವರು ನಟಿಸಿದ ಕನ್ನಡದ ‘ಅಮೃತವರ್ಷಿಣಿ’ ಸಿನಿಮಾ ಸೂಪರ್ ಹಿಟ್ ಎನಿಸಿತ್ತು.
——
Be the first to comment