ನೆನಪಿರಲಿ ಪ್ರೇಮ್ ಅವರು ನಾಯಕ ನಟನಾಗಿ ನಟಿಸುತ್ತಿರುವ ಚಿತ್ರದಲ್ಲಿ ಶರಣ್ಯ ಶೆಟ್ಟಿ ಅವರು ನಾಯಕ ನಟಿಯಾಗಿ ನಟಿಸುತ್ತಿದ್ದಾರೆ.
1980, ನಗುವಿನ ಹೂಗಳೇ, ಕೃಷ್ಣಂ ಪ್ರಣಯ ಸಖಿ, ಫಾರೆಸ್ಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಶರಣ್ಯ ಶೆಟ್ಟಿ ಅವರು ಪ್ರೇಮ್ ಅವರಿಗೆ ಜೋಡಿಯಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಹಾಗೂ ನಿರ್ದೇಶನವನ್ನು ತೇಜಲ್ ಅವರು ಮಾಡಿದ್ದು ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಪಾತ್ರದ ಬಗ್ಗೆ ಉತ್ಸುಕಳಾಗಿದ್ದೇನೆ. ಇದೂವರೆಗೂ ಮಾಡಿದ ಪಾತ್ರಗಳಿಗಿಂತ ಈ ಚಿತ್ರದಲ್ಲಿ ಮಾಡಿರುವ ಪಾತ್ರ ವಿಭಿನ್ನವಾಗಿದೆ. ಚಿತ್ರದಲ್ಲಿ ನಾಯಕ ನಟಿಯಾಗಿದ್ದೇನೆ. ನಾಯಕ ನಟಿಯಾಗಬೇಕೆಂಬ ಬಯಕೆ ಇತ್ತು. ಯಾವಾಗಲೂ ವಿಭಿನ್ನ ಪಾತ್ರ ಮಾಡಲು ಬಯಸುತ್ತೇನೆಂದು ಶರಣ್ಯಾ ಶೆಟ್ಟಿ ಅವರು ಹೇಳಿದ್ದಾರೆ.
ಗೀತಾಂಜಲಿ ಬಿ ಎಸ್ ಅವರ ಪೆಂಟ್ರಿಕ್ ಎಂಟರ್ಟೈನ್ಮೆಂಟ್ಸ್ ನಿರ್ಮಾಣದ ಇನ್ನೂ ಹೆಸರಿಡದ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಕರಾಗಿದ್ದಾರೆ.
ಟಾಲಿವುಡ್ ಚಿತ್ರವೊಂದಕ್ಕೂ ಶರಣ್ಯಾ ಸಹಿ ಹಾಕಿದ್ದು, ಚಿತ್ರದ ಬಗ್ಗೆ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ. ವಿಶ್ವಕ್ ಸೇನ್ ಜೊತೆ ಶರಣ್ಯಾ ನಟಿಸುತ್ತಿದ್ದಾರೆ.
Be the first to comment