‘ರಾಮರಸ’ ಚಿತ್ರತಂಡ ಸೇರಿದ ಶರಣ್

ನಟ ಶರಣ್ ಗುರು ದೇಶಪಾಂಡೆ ನಿರ್ಮಿಸಿರುವ ‘ರಾಮರಸ’  ಚಿತ್ರತಂಡ ಸೇರಿದ್ದಾರೆ. ಶರಣ್  ದೇವೇಂದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ ಶರಣ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಬಿಎಂ ಗಿರಿರಾಜ್ ನಿರ್ದೇಶನದ  ‘ರಾಮರಸ’  ಚಿತ್ರದಲ್ಲಿ ಶರಣ್  ಆಸಕ್ತಿದಾಯಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ ಪಾತ್ರದ ನಿಜವಾದ ಉದ್ದೇಶವನ್ನು ಫ್ರಾಂಚೈಸಿಯ ಮುಂದಿನ ಅಧ್ಯಾಯದಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ಬಾಲಾಜಿ ಮನೋಹರ್ ಜೊತೆಗೆ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕರಾಗಿ ನಟಿಸಿದ್ದಾರೆ.  ಅಧ್ಯಕ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಹೆಬಾ ಪಟೇಲ್  ‘ರಾಮರಸ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಭ್ರಮರಿ ಪಾತ್ರದಲ್ಲಿ ಹೆಬಾ ಪಟೇಲ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರವನ್ನು ಅಮಲೇರಿಸುವ ಶಕ್ತಿಯಾಗಿ, ಮಕರಂದವನ್ನು ಬೆನ್ನಟ್ಟುವ ಜೇನುನೊಣದ ಭ್ರಮೆ , ಅದರಿಂದ ಶಾಶ್ವತವಾಗಿ ತಪ್ಪಿಸಿಕೊಳ್ಳಲಾಗದ  ಪಾತ್ರವನ್ನಾಗಿ ಚಿತ್ರಿಸಲಾಗಿದೆ.

ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್‌ನ ‘ರಾಮರಸ’ ಚಿತ್ರಕ್ಕೆ ಬಿಜೆ ಭರತ್ ಅವರ ಸಂಗೀತ ಮತ್ತು ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!