ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮ PA ಎಂಬ ಪ್ರೊಡಕ್ಷನ್ ನಿರ್ಮಾಣದ ಎರಡನೇ ಚಿತ್ರ ಘೋಷಿಸಿದ್ದಾರೆ.
PA ಪ್ರೊಡಕ್ಷನ್ ನಿರ್ಮಾಣದ ಎರಡನೇ ಚಿತ್ರಕ್ಕೆ ಶರಣ್ ನಾಯಕ. ಚೊಚ್ಚಲ ಚಿತ್ರ ‘ಕೊತ್ತಲವಾಡಿ ‘ಬಿಡುಗಡೆಗೂ ಮೊದಲೇ ಪುಷ್ಪ ಅರುಣ್ ಕುಮಾರ್ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.
ಕೊತ್ತಲವಾಡಿ ಟೀಸರ್ ನ್ನು ಶರಣ್ ಬಿಡುಗಡೆ ಮಾಡಿದ್ದಾರೆ. ಈ ವೇದಿಕೆಯಲ್ಲಿ ಪುಷ್ಪ , ‘ ನಮ್ಮ ಸಂಸ್ಥೆಯಿಂದ 2ನೇ ಸಿನಿಮಾವನ್ನು ಶರಣ್ ಜೊತೆ ಮಾಡುತ್ತೇವೆ. ಮೊದಲ ಚಿತ್ರವನ್ನೇ ಅವರ ಜೊತೆ ಮಾಡಬೇಕಿತ್ತು. ಆದರೆ ನನಗೆ ಧೈರ್ಯ ಇರಲಿಲ್ಲ. ಈಗ ಒಂದು ಸಿನಿಮಾವನ್ನು ಬೇರೆಯವರ ಜೊತೆ ಮಾಡಿದ್ದೇನೆ. 2ನೇ ಸಿನಿಮಾವನ್ನು ಶರಣ್ ಜೊತೆ ಮಾಡುತ್ತೇನೆ ಎಂಬುದನ್ನು ವೇದಿಕೆಯಲ್ಲಿ ಹೇಳುತ್ತಿದ್ದೇನೆ’ ಎಂದಿದ್ದಾರೆ.
‘ಕೊತ್ತಲವಾಡಿ’ ಸಿನಿಮಾದಲ್ಲಿ ಪೃಥ್ವಿ ಅಂಬರ, ಕಾವ್ಯಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಯುವ ನಿರ್ದೇಶಕ ಶ್ರೀರಾಜ್ ಆಕ್ಷನ್ ಕಟ್ ಹೇಳಿದ್ದಾರೆ.
ಯಶ್ ತಮ್ಮದೇ ಮಾನ್ ಸ್ಟರ್ ಮೈಡ್ ಪ್ರೊಡಕ್ಷನ್ ಹುಟ್ಟುಹಾಕಿದ್ದು, ಈ ಸಂಸ್ಥೆಯಡಿ ರಾಮಾಯಣ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.
—–

Be the first to comment