Shambo Shiva Shankara ಡಿ. 16ಕ್ಕೆ ‘ಶಂಭೋ ಶಿವ ಶಂಕರ’ ತೆರೆಗೆ

ವರ್ತೂರು ಮಂಜು ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದ ‘ಶಂಭೋ ಶಿವ ಶಂಕರ’ ಇದೇ ಶುಕ್ರವಾರ ಬಿಡುಗಡೆ ಆಗಲಿದೆ.

ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಶಂಕರ್‌ ಅವರ ಚೊಚ್ಚಲ ಚಿತ್ರ ಇದಾಗಿದೆ. ಅಭಯ್‌ ಪುನೀತ್‌ ಈ ಸಿನಿಮಾದ ಮುಖಾಂತರ ಚಂದನವನಕ್ಕೆ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ಸೋನಲ್ ಮೊಂತೆರೋ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.

ಆನಂದ್ ಆಡಿಯೋ ಮೂಲಕ ಚಿತ್ರದ ಹಾಡು ಬಿಡುಗಡೆಯಾಗಿದೆ. ನವೀನ್ ಸಜ್ಜು ಹಾಡಿರುವ ಚಿತ್ರದ ‘ನಾಟಿಕೋಳಿ’ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!