ನೀಲಿ ಚಿತ್ರ ತಾರೆ ಶಕೀಲಾ ಆರು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.
90ರ ದಶಕದಲ್ಲಿ ನೀಲಿಚಿತ್ರಗಳಲ್ಲಿ ನಟನೆಯಿಂದ ಹೆಸರು ಪಡೆದಿದ್ದ ಶಕೀಲಾ ಅವರು ಈಗ ನೀಲಿ ಚಿತ್ರಗಳ ನಟನೆಯಿಂದ ದೂರ ಉಳಿದಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಶಕೀಲಾ ಅವರು ಈಗ ‘ಡವ್ ಮಾಸ್ಟರ್’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2015 ರಲ್ಲಿ ತೆರೆ ಕಂಡಿದ್ದ ‘ಲವ್ ಯು ಆಲಿಯಾ’ ಸಿನಿಮಾದ ಬಳಿಕ ಶಕೀಲಾ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಮತ್ತೆ ಕನ್ನಡ ಸಿನಿಮಾದಲ್ಲಿ ನಡೆಸುತ್ತಿರುವ ಬಗ್ಗೆ ಮಾತನಾಡಿರುವ ಶಕೀಲಾ, ”ಬಹಳ ವರ್ಷಗಳ ಬಳಿಕ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಬಗ್ಗೆ ಖುಷಿ ಇದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಭಿನ್ನವಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಶೀಘ್ರ ಚಿತ್ರ ಬಿಡುಗಡೆ ಆಗಲಿದೆ” ಎಂದಿದ್ದಾರೆ.
ಆರ್ಯ ಅವರು ‘ಡವ್ ಮಾಸ್ಟರ್’ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕ ಆಗಿ ಕೆಲಸ ಮಾಡಲಿದ್ದಾರೆ. ಸಿನಿಮಾದಲ್ಲಿ ತಬಲಾ ನಾಣಿ, ಸುಂದರ್ ವೀಣಾ, ನವೀನ್ ಪಡೀಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇದು ಹಾಸ್ಯದೊಂದಿಗೆ ಸಾಮಾಜಿಕ ಸಂದೇಶವುಳ್ಳ ಸಿನಿಮಾ ಆಗಿದೆ ಎಂದು ಹೇಳಲಾಗಿದೆ.
ಸಲಗ’ ಖ್ಯಾತಿಯ ಕಾಕ್ರೂಚ್ ಸುಧಿ ಅವರು ಈ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಿ ಒಂದಕ್ಕೆ ಮದುವೆ ಮಾಡಿಸುವ ಕತೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಎರಡನೇ ನಾಯಕ ಆಗಿ ನಾಯಿ ರಾಖಿ ಕಾಣಿಸಿಕೊಳ್ಳಲಿದೆ. ನಾಯಕನಿಗೆ ನಾಯಿಯಿಂದ ಕೇಡಾಗುವ ಸನ್ನಿವೇಶ ಇದ್ದು, ಆಗ ನಾಯಕ ಏನೇನು ಮಾಡುತ್ತಾನೆ? ನಾಯಿ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವ ಕಥೆ ಸಿನಿಮಾದಲ್ಲಿ ಇದೆ. ಸಿನಿಮಾಕ್ಕೆ ರೋಷನ್ ಪಾಷಾ ಬಂಡವಾಳ, ಶಕೀಲ್ ಅಹ್ಮದ್ ಸಂಗೀತ, ಕಿರಣ್ ಛಾಯಾಗ್ರಹಣ ಮಾಡಿದ್ದಾರೆ.
___

Be the first to comment