ಕನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜೊತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ಶಾಖಾಹಾರಿ ಚಿತ್ರ ತಾಜಾ ಉದಾಹರಣೆ..ತನ್ನ ಗಟ್ಟಿ ಕಂಟೆಂಟ್ ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್ ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಅಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್ ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ..ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ..
ಶಾಖಾಹಾರಿಗೆ ಜೈ ಎಂದ ಸತೀಶ್ :
ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಬಾಯ್ ತುಂಬಾ ಹೊಗಳಿದ್ದಾರೆ. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ,ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ,ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ.ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ.ನೋಡಲೇಬೇಕಾದ ನಮ್ಮ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.
ಕ್ಲೈಮ್ಯಾಕ್ಸ್ ಚಿಂದಿ ಎಂದ ಪೃಥ್ವಿ :
ನಟ ಪೃಥ್ವಿ ಅಂಬಾರ್ ಕೂಡ ಚಿತ್ರವನ್ನು ನೋಡಿ ಮನಸಾರೆ ಕೊಂಡಾಡಿದ್ದಾರೆ. ಶಾಖಾಹಾರಿ ಬಿಡುಗಡೆ ಸಮಯದಲ್ಲಿ ನನ್ನ ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನನಗೆ ಬೇಸರವಿದೆ. ಚಿತ್ರದ ಕಥೆ, ಟ್ವಿಸ್ಟ್, ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ. ರಂಗಾಯಣ ರಘು ಸರ್ ಹಾಗೂ ಗೋಪಾಲ್ ದೇಶಪಾಂಡೇ ಸರ್ ಅಭಿನಯ ಸೂಪರ್ ಎಂದಿದ್ದಾರೆ.
watching Shakhahaari :
Be the first to comment