ಶಫಾಲಿ ಜರಿವಾಲಾ

‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನಿಧನ

‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ‘ಹುಡುಗರು’ ಚಿತ್ರದ ಖ್ಯಾತಿಯ ನಟಿ ಶಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ  42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು. ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆಗಲೇ ಅವರು ನಿಧನ ಹೊಂದಿದ್ದರು.

ಶೆಫಾಲಿ ಮುಂಬೈನಲ್ಲಿ ಹುಟ್ಟಿ, ಬೆಳೆದರು. 2004ರಲ್ಲಿ ಅವರು ಹರ್ಮೀತ್ ಸಿಂಗ್​ ನ್ನು ವಿವಾಹ ಆದರು. ಬಳಿಕ  ವಿಚ್ಛೇದನ ಪಡೆದರು. 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ವಿವಾಹ ಆದರು. ಎರಡನೇ ಪತಿಯ ಜೊತೆ  ಅವರು ಸಂಸಾರ ನಡೆಸುತ್ತಿದ್ದರು.

2004ರ ‘ಕಾಂಟಾ ಲಗಾ..’ ಹಾಡಿನಲ್ಲಿ ಶೆಫಾಲಿ ಭರ್ಜರಿ ಡ್ಯಾನ್ಸ್ ಮಾಡಿದ್ದರು. 2011ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ಹುಡುಗರು’ ಸಿನಿಮಾದಲ್ಲಿ ಅವರು ‘ಪಂಕಜಾ..’ ಹಾಡಿಗೆ ಮಸ್ತ್  ಸ್ಟೆಪ್ ಹಾಕಿದ್ದರು. 2019ರಲ್ಲಿ ಆರಂಭ ಆದ ‘ಬಿಗ್ ಬಾಸ್ ಸೀಸನ್ 13’ರಲ್ಲಿ ಶಫಾಲಿ ಜರಿವಾಲಾ ಸ್ಪರ್ಧಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!