ಪ್ರಮೋದ್ ಶೆಟ್ಟಿ ನಾಯಕ ನಟನೆಯ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸಿನಿಮಾದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನಡೆಯಿತು.
ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹರೀಶ್ ಸಾ.ರಾ ಚಿತ್ರದ ನಿರ್ದೇಶಕ. ಕಥೆ ಬಿ.ಎಸ್.ರಾಜಶೇಖರ ಬರೆದಿದ್ದಾರೆ. ಪ್ರಕಾಶ್ ಅವರು ಕಿಶನ್ ಪ್ರೊಡಕ್ಷನ್ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 1980ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರಕಥೆ ಬರೆಯಲಾಗಿದೆ. ಹಾಸ್ಯ, ಮರ್ಡರ್ ಮಿಸ್ಟ್ರಿ, ಥ್ರಿಲ್ಲರ್ ಅಂಶ ಈ ಚಿತ್ರದಲ್ಲಿದೆ. ಮೂಡಿಗೆರೆಯಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ತರಲೆ ಮಾಡುವ ಪೋಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಲಿದ್ದಾರೆ. ಪ್ರಿಯಾ ನಾಯಕಿ ಆಗಿ ನಟಿಸಲಿದ್ದಾರೆ.
ರಂಗಾಯಣ ರಘು, ರಾಹುಲ್, ರವಿತೇಜ, ಲಕ್ಷೀಪ್ರಿಯ ಸಾಹು, ಮನು, ಅಜಯ್, ಮಿತ್ರ, ರೂಪಾ, ಸುಧಾಮಣಿ, ಇಂದಿರಮ್ಮ, ಮಮತಾ ರಾಜಶೇಖರ್ ತಾರಾಬಳಗದಲ್ಲಿದ್ದಾರೆ.
ಕಾರ್ತಿಕ್ ಭೂಪತಿ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಅಣಜಿ ನಾಗರಾಜ್, ಸಂಕಲನ ಪ್ರವೀಣ್ ಬೇಲೂರು ಅವರದ್ದು ಆಗಿದೆ.
_______

Be the first to comment