ತಮ್ಮನ್ನು ಮನೆಗೆ ಕರೆಸಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದರು ಎಂದು ಸೀರಿಯಲ್ ನಟಿ ನವೀನಾ ಬೋಲೆ, ಬಾಲಿವುಡ್ ನಿರ್ದೇಶಕ ಸಾಜೀದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಯೇ ಹೈ ಮೊಹಬ್ಬತೇನ್, ಕುಂಕುಮ್ ಭಾಗ್ಯ, ಸಪ್ನಾ ಬಾಬುಲ್ ಕಾ..ಬಿದಾಯಿ, ಯಹಾ ಮೈಂ ಘರ್ ಘರ್ ಖೇಲಿ ಮತ್ತು ತೇರೆ ಇಷ್ಕ್ ಮೇ ಘಾಯಲ್, ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಮುಂತಾದ ಹಿಂದಿಯ ಪ್ರಸಿದ್ಧ ಸೀರಿಯಲ್‌ಗಳಲ್ಲಿ ನಟಿಸಿರುವ ನವೀನಾ ಬೋಲೆ, ಟಾಕ್ ಸೋ ನಡೆಸಿಕೊಡುವ ಸುಭೋಜಿತ್ ಘೋಷ್ ಅವರೊಂದಿಗಿನ ಸಂದರ್ಶನದಲ್ಲಿ ‘ನಾನು ಎಂದಿಗೂ ಭೇಟಿಯಾಗಲು ಬಯಸದ ಒಬ್ಬ ಭಯಾನಕ ವ್ಯಕ್ತಿ ಸಾಜಿದ್ ಖಾನ್’ ಎಂದು ಆರೋಪಿಸಿದ್ದಾರೆ.
ದಶಕದ ಹಿಂದಿನ ಘಟನೆಯನ್ನು ನಡೆದ ನವೀನಾ ಬೋಲೆ, ‘ಆತ ಮನೆಗೆ ಕರೆದಾಗ ನಾನು ತುಂಬಾ ಖುಷಿಯಾಗಿದ್ದೆ. ಆದರೆ ಅಲ್ಲಿಗೆ ಹೋದಾಗ ಆತ ನನ್ನನ್ನು ಬಟ್ಟೆ ಬಿಚ್ಚಿ ಬರೀ ಒಳ ಉಡುಪಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ. ಅಲ್ಲದೇ ನೀನು ಹೀಗೆ ಎಷ್ಟು ಆರಾಮವಾಗಿರುತ್ತಿಯಾ ಎಂದು ನಾನು ನೋಡಬೇಕು ಎಂದು ಹೇಳಿದ. 2004 ಮತ್ತು 2006 ರ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ’ ಎಂದು ನವೀನಾ ಬೋಲೆ ಹೇಳಿದ್ದಾರೆ.
‘ಸಾಜಿದ್ ಖಾನ್ ಮನೆಯಲ್ಲೇ ಕಚೇರಿ ಇತ್ತು. ನೀವು ನಿಜವಾಗಿಯೂ ನೋಡಲು ಬಯಸಿದರೆ ನಾನು ಮನೆಗೆ ಹೋಗಿ ಬಿಕಿನಿ ಹಾಕಿಕೊಳ್ಳಬೇಕು. ಆದರೆ ನಾನು ಈಗ ಇಲ್ಲಿ ಕುಳಿತು ಬಟ್ಟೆ ಬಿಚ್ಚಲು ಸಾಧ್ಯವಿಲ್ಲ ಎಂದು ಹೇಳಿದೆ’ ಎಂದು ನವೀನಾ ಬೋಲೆ ಹೇಳಿದ್ದಾರೆ.
‘ನಾನು ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದೆ. ನಂತರ ಆತ ಯಾಕೆ ನೀನು ಬರುತ್ತಿಲ್ಲ, ನೀನು ಎಲ್ಲಿಗೆ ತಲುಪಿದೆ ಎಂದು ಕೇಳಿಕೊಂಡು ಕನಿಷ್ಠ ನನಗೆ 50 ಸಲ ಕರೆ ಮಾಡಿದ್ದ. ಒಂದು ವರ್ಷದ ನಂತರ ಮಿಸ್ ಇಂಡಿಯಾಗೆ ಭಾಗವಹಿಸಲು ಸಿದ್ಧಗೊಳ್ಳುತ್ತಿದ್ದಾಗ ಆತ ಮತ್ತೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ’ ಎಂದು ನವೀನಾ ಹೇಳಿದ್ದಾರೆ.
ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಟಿವಿ ನಿರೂಪಕನೂ ಆಗಿರುವ ಸಾಜಿದ್ ಖಾನ್ ವಿರುದ್ಧವೂ ಹಲವು ನಟಿಯರು ಆರೋಪ ಮಾಡಿದ್ದರು. ಸಲೋನಿ ಚೋಪ್ರಾ, ಶೆರ್ಲಿನ್ ಚೋಪ್ರಾ, ಅಹಾನಾ ಕುಮ್ರಾ, ಮಂದನಾ ಕರಿಮಿ ಸೇರಿದಂತೆ ಸುಮಾರು ಒಂಬತ್ತು ಮಹಿಳೆಯರು ಸಾಜಿದ್ ಖಾನ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು.
—-

Be the first to comment