ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಎದುರು ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾಕ್ಕೆ ದೊಡ್ಡ ಹಿನ್ನಡೆಯೊಂದು ಎದುರಾಗಿದೆ. ‘ಬೀಸ್ಟ್’ ಸಿನಿಮಾದ ಪ್ರದರ್ಶನವನ್ನು ಕುವೈತ್ ರಾಷ್ಟ್ರದಲ್ಲಿ ತಡೆಹಿಡಿಯಲಾಗಿದೆ.
‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ. ‘ಬೀಸ್ಟ್’ ಸಿನಿಮಾ ಏಪ್ರಿಲ್ 13 ಕ್ಕೆ ಬಿಡುಗಡೆ ಆಗುತ್ತಿದೆ. ಇಬ್ಬರು ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಪರಸ್ಪರ ಎದುರಾಗುತ್ತಿರುವುದು ಕುತೂಹಲ ಮೂಡಿಸಿದೆ.
ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಯಾದ ಕುವೈತ್ ರಾಷ್ಟ್ರದಲ್ಲಿ ‘ಬೀಸ್ಟ್’ ಸಿನಿಮಾ ಸೆನ್ಸಾರ್ ಪಾಸ್ ಮಾಡಲು ವಿಫಲವಾಗಿದೆ. ಅಲ್ಲಿ ಸಿನಿಮಾದ ಪ್ರದರ್ಶನವನ್ನು ತಡೆ ಹಿಡಿಯಲಾಗಿದೆ. ಸಿನಿಮಾವು ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಇರುವ ಕಾರಣ ಸಿನಿಮಾವನ್ನು ಪ್ರದರ್ಶಿಸಲು ಅಸಾಧ್ಯಎಂದು ಕುವೈತ್‌ನ ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿದೆ.
ಭಯೋತ್ಪಾದಕರು ಮಾಲ್ ಒಂದರಲ್ಲಿ ಜನರನ್ನು ಒತ್ತೆಯಾಳಾಗಿರಿಸಿಕೊಂಡಿರುತ್ತಾರೆ. ಅದೇ ಮಾಲ್‌ನಲ್ಲಿ ಸಿಲುಕಿರುವ ನಾಯಕ ಭಯೋತ್ಪಾದಕರ ಜೊತೆಗೆ ಹೋರಾಡಿ ಅವರನ್ನು ರಕ್ಷಿಸುವ ಕತೆಯನ್ನು ಸಿನಿಮಾ ಹೊಂದಿದೆ.
‘ಬೀಸ್ಟ್’ ಸಿನಿಮಾದಲ್ಲಿ ಇಸ್ಲಾಂ ಭಯೋತ್ಪಾದನೆ ತೋರಿಸಲಾಗಿದೆ. ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳ ಬಗ್ಗೆ ಋಣಾತ್ಮಕ ಸಂಭಾಷಣೆ, ಸಂದೇಶ ಸಾರುವ ದೃಶ್ಯಗಳಿವೆ ಎಂಬ ಕಾರಣಕ್ಕೆ ‘ಬೀಸ್ಟ್’ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೆ ಚಿತ್ರಕ್ಕೆ ಯುಎಇಯಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ.
‘ಬೀಸ್ಟ್’ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ, ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ.
___

Be the first to comment