ಕಾವ್ಯಾಂಜಲಿಯ ಬಂಧವನ್ನು ಮತ್ತಷ್ಟು ಬೆಸೆಯಲು ಮನಸಾರೆಯೊಂದಿಗೆ ನಡೀತಿದೆ ಮಹಾಸಂಗಮ. ಹಲವಾರು ಸಮಸ್ಯೆ ಮತ್ತು ಮನಸ್ತಾಪಗಳನ್ನು ಎದುರಿಸಿರುವ ಸೇವಂತಿ ದೇವರ ಮೊರೆ ಹೋಗಿದ್ದಾಳೆ. ಇನ್ನೊಂದೆಡೆ ದೇವರ ವಿಧಿ ಎನ್ನುವ ಹಾಗೆ ಕಸ್ತೂರಿ ನಿವಾಸದವರು ದೇವಿಯ ಕೃಪೆಗೆ ಪಾತ್ರರಾಗಲು ಹೊರಟಿದ್ದಾರೆ. ಕಸ್ತೂರಿ ನಿವಾಸದಲ್ಲಿರುವ ದ್ವೇಷ ದೂರಾಗುತ್ತಾ? ಸೇವಂತಿಯ ನಿಷ್ಕಲ್ಮಶ ಮನಸ್ಸಿಗೆ ಗೆಲುವು ಸಿಗುತ್ತಾ? ಎಂಬುದಕ್ಕೆ ಮಹಾಸಂಗಮದಲ್ಲಿ ತೆರೆ ಬೀಳಲಿದೆ.

ವೇದಾ ಹುಟ್ಟಿದಹಬ್ಬದಂದು ಮನೆಯವರೆಲ್ಲ ಸೇರಿ ಪ್ಲಾನ್ ಮಾಡಿ, ವೇದಾ ಗೆಳೆಯನಾದ ಮನಸಾರೆ ಧಾರಾವಾಹಿಯ ಆನಂದ್ ಮಹೇಂದ್ರ ಮತ್ತು ಕುಟುಂಬದವರನ್ನು ಕರೆಸಿ ವೇದಾಳಿಗೆ ಸರ್ಪೈಸ್ ಕೊಡುವರು. ಇದರ ಮಧ್ಯೆ ಕಾವ್ಯಾ ಹಠಕ್ಕೆ ಅಂಜಲಿಯೂ ಕೂಡ ವೇದಾ ಮನೆಗೆ ಬರುವ ಸನ್ನಿವೇಶ ಎದುರಾಗುತ್ತದೆ.

ಹಾಗೆ ಇನ್ನೊಂದೆಡೆ ಪ್ರಾರ್ಥನಾ ಕುಟುಂಬದೊಂದಿಗೆ ಯುವ ಕೂಡ ಅಲ್ಲಿಗೆ ಬರುವಂತ್ತಾಗುತ್ತದೆ. ವೇದಾ ಮತ್ತು ಅಂಜಲಿಯ ನಡುವೆ ಇರುವ ಶೀತಲ ಸಮರ ತಾರಕಕ್ಕೇರುತ್ತಾ? ಸುಶಾಂತ್‌ ಮನಸಿನ ಒದ್ದಾಟ ಅಂಜಲಿಗೆ ತಿಳಿಯುತ್ತಾ? ಪ್ರಾರ್ಥನಾ ಪ್ರೀತಿಗೆ ಕಾಯುತ್ತಿರುವ ಯುವನಿಗೆ ಪ್ರೀತಿಯ ಸಹಿ ಸಿಗುತ್ತಾ? ಎಂಬುದು ಈ ಮಹಾಸಂಗಮದಲ್ಲಿ ಹೊರಬೀಳಲಿದೆ.

ಮನೆಯವರ ಸಂತೋಷಕ್ಕೆ ತನ್ನ ನೋವನ್ನು ಮರೆಮಾಚುವ ಸೇವಂತಿ ಒಂದೆಡೆಯಾದರೆ, ಮೃದುಲಾ ಮತ್ತು ಮಂಗಳ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಹೋರಾಡುತ್ತಿರುವ ಕಸ್ತೂರಿನಿವಾಸದ ಪಾರ್ವತಿ ಇನ್ನೊಂದೆಡೆ. ಅಕ್ಕ ತಂಗಿಯ ಬಾಂಧವ್ಯದ ಕಥೆಯಾದ ಕಾವ್ಯಾಂಜಲಿಯ ಜೊತೆ ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳ ಕಥೆ ಮನಸಾರೆ.

ಇವೆರಡರ ಮಹಾಸಂಗಮದಲ್ಲಿ ಮಹತ್ತರ ತಿರುವು ಕಾಣಲಿದ್ದು, ಬೇಡಿಕೆಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಕೊರೊನಾ ವೈರಸ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಪೂರ್ಣಗೊಳಿಸಿದ್ದು ಸೆಪ್ಟೆಂಬರ್ 7ರ ಸಂಜೆ 7 ರಿಂದ 8 ರ ವರೆಗೆ ಕಸ್ತೂರಿ ನಿವಾಸ – ಸೇವಂತಿ ಮತ್ತು ರಾತ್ರಿ 8.30 ರಿಂದ ರಾತ್ರಿ 9.30ರ ವರೆಗೆ ಕಾವ್ಯಾಂಜಲಿ – ಮನಸಾರೆ ಮಹಾಸಂಗಮಗಳ ಮಹಾಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.