ಬಹುಭಾಷಾ ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (67) ನಿಧನರಾಗಿದ್ದಾರೆ.
ರಾಯಚೂರಿನ ಕೆ.ಎಂ.ಕಾಲನಿಯಲ್ಲಿ ವಾಸವಿದ್ದ ಚಲಪತಿ ಚೌದ್ರಿ ಅವರನ್ನು ಅನಾರೋಗ್ಯ ಹಿನ್ನೆಲೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದಾರೆ.
ಆಂಧ್ರದ ವಿಜಯವಾಡ ಮೂಲದ ಚೌದ್ರಿ ಅವರು ರಾಯಚೂರಿನಲ್ಲಿ ಮೊದಲ ಬಾರಿ ಕೇಬಲ್ ಆರಂಭಿಸಿದ್ದ ಹೆಗ್ಗಳಿಕೆ ಹೊಂದಿದ್ದರು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಚಲಪತಿ ನಟಿಸಿದ್ದಾರೆ.
ಶಿವರಾಜ್ ಕುಮಾರ್, ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಹೆಗ್ಗಳಿಕೆ ಇವರದ್ದು ಆಗಿದೆ.
ಚೌದ್ರಿ ಅಗಲಿಕೆಗೆ ಸಿನಿಮಾ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ವಗೃಹದಲ್ಲಿ ಅಂತಿಮದರ್ಶಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಗರದ ಬಿಆರ್ಬಿ ಕಾಲೇಜು ಸಮೀಪದ ಮುಕ್ತಿಧಾಮದಲ್ಲಿ ಇಂದು(ಗುರುವಾರ) ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
__
Be the first to comment