ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವಮ್-2 ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ನಿರ್ಮಾಣ ಸಂಸ್ಥೆ ಲೈಸಾ ಪ್ರೊಡಕ್ಷನ್, ಪೊನ್ನಿಯನ್ ಸೆಲ್ವಮ್-2 ಚಿತ್ರ 2023ರ ಏಪ್ರಿಲ್ 28ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ ಎಂದು ಪ್ರಕಟಿಸಿದೆ.
ಪೊನ್ನಿಯನ್ ಸೆಲ್ವಮ್ ಚಿತ್ರ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಎರಡನೇ ಭಾಗದ ನಿರೀಕ್ಷೆ ಹೆಚ್ಚಾಗಿದೆ.
ಎರಡೂ ಭಾಗಗಳ ಚಿತ್ರೀಕರಣ ಮುಗಿದಿದ್ದರೂ ಎರಡನೇ ಭಾಗದ ಬಿಡುಗಡೆ ದಿನಾಂಕದ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು.
ವಿಕ್ರಮ್, ಐಶ್ವರ್ಯ ರೈ ಬಚ್ಚನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
___

Be the first to comment