ಅಕ್ಷಿತ್‌ಶಶಿಕುಮಾರ್ ಮೊದಲ ಚಿತ್ರ ’ಸೀತಾಯಣ’ ತೆರೆಗೆ ಸಿದ್ದ

ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಅಭಿನಯಿಸಿರುವ ಚಿತ್ರ ’ಸೀತಾಯಣ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡಿದೆ. ಸಿನಿಮಾದ ಕುರಿತಂತೆ ವಿವರ ನೀಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ರಾಜವರ್ಧನ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ನನ್ನ ತಂದೆ ಹಾಗೂ ಶಶಿಕುಮಾರ್ ತುಂಬ ಆಪ್ತರು. ಚಿತ್ರದಲ್ಲಿ ಒಳ್ಳೆ ಅಂಶಗಳು ಇರಲಿದೆ. ಲವರ್ ಬಾಯ್ ಆಗಿದ್ದರೂ ಆಕ್ಷನ್ ಸೀನ್‌ದಲ್ಲಿ ಮಿಂಚಿದ್ದಾರಾ. ಎಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರ ಮಕ್ಕಳು ಮೇಲಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನು ನಟಿಸಿರುವ ಪ್ರಥಮ ಚಿತ್ರಕ್ಕೆ ಅಪ್ಪು ಸರ್ ಹಾಡಿರೋದು ನನ್ನ ಪುಣ್ಯ ಎನ್ನಬಹುದು. ಅಪ್ಪ ಒಳ್ಳೆ ಡ್ಯಾನ್ಸರ್ ಆಗಿದ್ದರು. ಆದರೆ ಇದರಲ್ಲಿ ನಾನು ಡ್ಯಾನ್ಸ್ ಮಾಡಿಲ್ಲ. ಮುಂದಿನ ಚಿತ್ರದಲ್ಲಿ ಖಂಡಿತ ಮಾಡುವೆ. ಶಿವರಾಜ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರೆ, ಉಪೇಂದ್ರ ಅವರು ಹಾಡನ್ನು ಅನಾವರಣಗೊಳಿಸಿದರು. ರಶ್ಮಿಕಾಮಂದಣ್ಣ ಮತ್ತೋಂದು ಗೀತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. 2019ರಲ್ಲಿ ಶುರುವಾಗಿ 2020ರಲ್ಲಿ ಮುಗಿಯಿತು. ಕರೋನ ಕಾರಣದಿಂದ ತಡವಾಗಿದೆ. ಪ್ರೀತಿಯ ಕಥೆ ಆದರೂ ವಿರಾಮದ ನಂತರ ಥ್ರಿಲ್ಲರ್ ಅಂಶಗಳು ಬರಲಿದ್ದು, ಸಾಕಷ್ಟು ತಿರುವುಗಳಿಂದ ಕೂಡಿದೆ. ಮದ್ಯಮ ವರ್ಗದ ಹುಡುಗನಾಗಿ ಸಮಸ್ಯೆಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾನೆ ಎನ್ನುವ ಪಾತ್ರವಾಗಿದೆ. ಮಾತೃಭಾಷೆ ಕನ್ನಡವಾಗಿರುವುದರಿಂದ ಮೊದಲು ಇಲ್ಲಿ ರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ತೆಲುಗುದಲ್ಲಿ ಬರಲಿದೆ ಎಂಬುದಾಗಿ ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.

ರಾಮಾಯಣದಲ್ಲೂ ನಾಯಕ, ನಾಯಕಿ ಖಳನಾಯಕ ಇದ್ದಂತೆ ಇದರಲ್ಲೂ ಅದೆಲ್ಲವೂ ಇದೆ. ಅದಕ್ಕಾಗಿ ಸೀತಾಯಣ ಹೆಸರನ್ನು ಇಡಲಾಗಿದೆ. ಮಂಗಳೂರು, ಆಗುಂಬೆ, ವೈಜಾಕ್, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಲಲಿತಾರಾಜಲಕ್ಷೀ ಬಂಡವಾಳ ಹೂಡಿದ್ದಾರೆ ಅಂತ ರಚಿಸಿ ನಿರ್ದೇಶನ ಮಾಡಿರುವ ಪ್ರಭಾಕರ್‌ಆರಿಪ್ಕಾ ಮಾಹಿತಿ ನೀಡಿದರು.

ಕವಿರಾಜ್ ಮತ್ತ ಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ ಭಾರದ್ವಾಜ್ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ದುರ್ಗಪ್ರಸಾದ್‌ಕೊಲ್ಲಿ, ಸಂಕಲನ ಪ್ರವೀಣ್‌ಪುಡಿ ಅವರದಾಗಿದೆ. ಇದಕ್ಕೂ ಮುನ್ನ ಟ್ರೇಲರ್ ಮತ್ತು ಪುನೀತ್‌ರಾಜ್‌ಕುಮಾರ್ ಹಾಡಿರುವ ’ಯಾರು ನೀನು ಯಾರು, ಹರಿವ ನದಿಗೆ ಎದುರು ನಾನು ಈಜಿರುವೆ’ ವಿಡಿಯೋ ಗೀತೆಯನ್ನು ತೋರಿಸಲಾಯಿತು. ಆಮದು ನಾಯಕಿ ಅನಹಿತಾಭೂಷಣ್ ಗೈರುಹಾಜರಿಯಲ್ಲಿ ಕಾರ್ಯಕ್ರಮ ನಡೆಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!