ನಿರ್ದೇಶನ : ಪ್ರಭಾಕರ್ ಆರಿಪಾಕ
ನಿರ್ಮಾಪಕ: ರಾಜ್ಯಲಕ್ಷ್ಮಿ
ತಾರಾಗಣ: ಅಕ್ಷಿತ್ ಶಶಿಕುಮಾರ್, ಅನಹಿತಾ ಭೂಷಣ್, ವಿದ್ಯುಲೇಖ ರಮಣ್ ಮುಂತಾದವರು
ರೇಟಿಂಗ್: 3/5
ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ‘ಸೀತಾಯಣ’ ಸಿನಿಮಾ ರೊಮ್ಯಾಂಟಿಕ್ ಸಿನಿಮಾದ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಆಗಿ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಸಸ್ಪೆನ್ಸ್, ಕ್ರೈಂ ಎಲಿಮೆಂಟ್ಸ್ ಕೂಡ ಇದ್ದು ನೋಡುಗರಿಗೆ ವಿಭಿನ್ನ ಅನುಭವ ನೀಡುತ್ತದೆ.
ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ರಿಲೀಸ್ ಆಗಿದೆ.
ಚಿತ್ರದ ನಾಯಕ ರಾಹುಲ್ ಮಧ್ಯಮ ವರ್ಗದ ಯುವಕ. ತನ್ನ ಕಾಲಮೇಲೆ ತಾನು ನಿಂತುಕೊಳ್ಳಬೇಕು ಅನ್ನುವುದು ಅವನ ಗುರಿ. ನಾಯಕಿ ಸೀತಾ ಆ್ಯಡ್ ಫಿಲ್ಮ್ ಮೇಕರ್. ರಾಹುಲ್ ನೋಡಿ ಮೊದಲ ನೋಟದಲ್ಲೇ ಸೀತಾಗೆ ಲವ್. ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗುತ್ತಾರೆ. ಆದರೆ ಮದುವೆ ನಂತರ ರಾಹುಲ್ ಗೆ ಸಮಸ್ಯೆ ಎದುರಾಗುತ್ತೆ. ಅದರಿಂದ ಹೊರಬರಲು ಆತ ಏನೆಲ್ಲಾ ಮಾಡ್ತಾನೆ ಎನ್ನುವುದು ಚಿತ್ರದ ಕಥೆ.
ರಾಮ, ಸೀತೆ, ರಾವಣ ಪಾತ್ರಗಳಿಗೆ ಹೋಲಿಸಿ ಚಿತ್ರದ ಪಾತ್ರಗಳನ್ನು ಡಿಸೈನ್ ಮಾಡಲಾಗಿದೆ. ಇದೇ ಕಾರಣಕ್ಕೆ ಸೀತಾಯಣ ಟೈಟಲ್ ಇಡಲಾಗಿದೆ.
ಹೀರೋ ಆಗಿ ಅಕ್ಷಿತ್ ಶಶಿಕುಮಾರ್ ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿಸಿದ್ದಾರೆ. ರಗಡ್ ಲವರ್ ಬಾಯ್ ಆಗಿ ಗಮನ ಸೆಳೆಯುತ್ತಾರೆ. ಬಹುತೇಕ ತೆಲುಗು ಕಲಾವಿದರು ಚಿತ್ರದಲ್ಲಿದ್ದಾರೆ. ತೆಲುಗಿನಲ್ಲಿ ಶೂಟ್ ಮಾಡಿರುವ ದೃಶ್ಯಗಳಿಗೆ ಕನ್ನಡದಲ್ಲಿ ಡಬ್ ಮಾಡಿರುವುದು ಕಸಿವಿಸಿ ಅನಿಸಿದರೂ ಅದನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕು.
ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ದುರ್ಗಪ್ರಸಾದ್ ಕೊಲ್ಲಿ ಛಾಯಾಗ್ರಹಣ, ಪದ್ಮನಾಭ ಭಾರಧ್ವಾಜ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.
______
Be the first to comment