ಸೀಸ್ ಕಡ್ಡಿ

Movie Review: ಯಶಸ್ಸಿನ ಬಗ್ಗೆ ಹೇಳುವ ಸೀಸ್ ಕಡ್ಡಿ

ಚಿತ್ರ: ಸೀಸ್ ಕಡ್ಡಿ
ನಿರ್ದೇಶನ: ರತನ್ ಗಂಗಾಧರ್
ನಿರ್ಮಾಣ: ಸಂಪತ್ ಶಿವಶಂಕರ್, ಕೃತಿ ನಾಣಯ್ಯ, ರತನ್
ಪಾತ್ರ ವರ್ಗ: ಸಿತಿನ್ ಅಪ್ಪಯ್ಯ , ರಾಮಮೂರ್ತಿ, ಅನುಷ್ಕಾ, ಸಂತೋಷ್, ಪ್ರಥಮ್, ಮಹೇಂದ್ರ ಇತರರು
ರೇಟಿಂಗ್ : 3.5

ಬದುಕಿನಲ್ಲಿ ಪ್ರತಿಯೊಬ್ಬರಿಗೂ ಸಂಕಷ್ಟಗಳು ಬರುತ್ತವೆ. ಇದನ್ನು ಎದುರಿಸಿ ಯಶಸ್ಸನ್ನು ಪಡೆಯುವ ಬಗ್ಗೆ ಮಾತನಾಡುವ ಚಿತ್ರ ಈ ವಾರ ತೆರೆಗೆ ಬಂದಿರುವ ಸೀಸ್ ಕಡ್ಡಿ.

ಚಿತ್ರದಲ್ಲಿ ಒಂದಷ್ಟು ಪಾತ್ರಗಳು ಸಂಕಷ್ಟದಲ್ಲಿ ಬೇಯುತ್ತವೆ. ಹಳ್ಳಿಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾ ಅನಾರೋಗ್ಯದ ತಂದೆಯನ್ನು ನೋಡಿಕೊಳ್ಳುವ ಮಂಜಿ, ಹುಡುಗಿಯ ಭವಿಷ್ಯಕ್ಕಾಗಿ ಓದಿಗೆ ಬೆಂಬಲವಾಗಿ ನಿಲ್ಲುವ ಫೋಟೋಗ್ರಾಫರ್ ಫರೀದ್ ಈ ರೀತಿಯ ಒಂದಷ್ಟು ಪಾತ್ರಗಳು ಚಿತ್ರದಲ್ಲಿವೆ. ಸಂಕಷ್ಟಗಳನ್ನು ಮೀರಿ ಈ ಪಾತ್ರಗಳು ಹೇಗೆ ಯಶಸ್ಸು ಕಾಣುತ್ತವೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ ಕನ್ನಡ ಭಾಷೆ ಬಳಕೆಯಾಗಿದೆ. ನಿರ್ದೇಶಕರು ಅಲ್ಲಿನ ಪ್ರಾದೇಶಿಕ ಸನ್ನಿವೇಶವನ್ನು ತೆರೆಯ ಮೇಲೆ ತರುವ ಯತ್ನ ಮಾಡಿದ್ದಾರೆ. ಕಮರ್ಷಿಯಲ್ ಅಲ್ಲದ ಈ ರೀತಿಯ ಚಿತ್ರ ನಿರ್ಮಿಸಲು ಧೈರ್ಯ ಮಾಡಿದ ನಿರ್ಮಾಪಕರಿಗೆ ಮೆಚ್ಚುಗೆ ಸೂಚಿಸಬೇಕಿದೆ.

ಚಿತ್ರದ ಹಿನ್ನೆಲೆ ಸಂಗೀತ, ಸಂಗೀತ, ಛಾಯಾಗ್ರಹಣ ಸೊಗಸಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಯತ್ನಿಸಿದ್ದಾರೆ.

ಸೀಸ ಕಡ್ಡಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗೆಯನ್ನು ಸೂಕ್ಷ್ಮವಾಗಿ ಹೇಳಿರುವ ಈ ಚಿತ್ರ ಸಿನಿಮಾಸಕ್ತರ ಗಮನ ಸೆಳೆಯುವ ಸಾಧ್ಯತೆ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!