ನಟಿ ಹರಿಪ್ರಿಯಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹರಿಪ್ರಿಯಾಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದ ಹರಿಪ್ರಿಯಾ ಇದೀಗ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಈ ವೇಳೆ ಹಲವು ನಟಿಯರು ಭಾಗಿಯಾಗಿ ಹರಿಪ್ರಿಯಾಗೆ ಶುಭ ಹಾರೈಸಿದ್ದಾರೆ.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಮೊದಲ ಮಗುಗಿನ ನಿರೀಕ್ಷೆಯಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ ಭಾಗವಹಿಸಿ ಹರಿಪ್ರಿಯಾಗೆ ಶುಭ ಕೋರಿದ್ದಾರೆ. ನಟಿಗೆ ಕುಂಕುಮ ಇಟ್ಟು ಗಿಫ್ಟ್ ನೀಡಿ ವಿಶ್ ಮಾಡಿದ್ದಾರೆ.
ಸೀಮಂತ ಸಮಾರಂಭಕ್ಕಾಗಿ ಗರ್ಭಿಣಿ ಹರಿಪ್ರಿಯಾ ತಮ್ಮ ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡಿದ್ದರು. ಹಸಿರು ಹಾಗೂ ತಿಳಿ ಕೆಂಪು ಬಣ್ಣದ ಸೀರೆಯಲ್ಲಿ ಹರಿಪ್ರಿಯಾ ಮಿಂಚುತ್ತಿದ್ದರು.
ಕಳೆದ ವರ್ಷ ಜ.26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಜೊತೆ ನಟಿ ಹಸೆಮಣೆ ಏರಿದರು. ಹಲವು ವರ್ಷ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಯಾದರು. ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ ಹರಿಪ್ರಿಯಾ ಇದೀಗ ಮೊದಲ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.
Be the first to comment