‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟ್ರೇಲರ್ ಔಟ್

ವಿಜಯ್ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದ  ಸೀಕ್ವೆಲ್  ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರ ಬಿಡುಗಡೆಯಾದ 5  ವರ್ಷಗಳ ಬಳಿಕ ಸೀಕ್ವೆಲ್  ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಮೊದಲ ಭಾಗದಂತೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್‌ನಲ್ಲಿ ವಿಜಯ್ ರಾಘವೇಂದ್ರ ಖಾಕಿ ತೊಟ್ಟು ಪೊಲೀಸ್ ಪಾತ್ರದಲ್ಲಿ ಮತ್ತೆ ಮಿಂಚಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಒಂದು ವಾರದೊಳಗೆ ನಡೆಯುವ ಎರಡು ಕೊಲೆ ಪ್ರಕರಣಗಳು, ಮುಂದಾಗಬಹುದಾದ ಮತ್ತೊಂದು ಕೊಲೆಯನ್ನು ತಡೆಯುವ ಜವಾಬ್ದಾರಿ ಹಾಗೂ ಕೊಲೆಗಾರನನ್ನು ಹಿಡಿಯುವ ಕಥಾನಾಯಕನ ಹೋರಾಟ ಚಿತ್ರದ ಮುಖ್ಯ ಕಥಾವಸ್ತುವಾಗಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’  ಚಿತ್ರ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!