MMB legacy

MMB legacy ಯ ದ್ವಿತೀಯ ವಾರ್ಷಿಕೋತ್ಸವ‌

ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಪ್ರಸ್ತುತ ಇವೆಂಟ್ ಮ್ಯಾನೇಜ್ಮೆಂಟ್ ‌ಮೂಲಕ ಚಿತ್ರರಂಗದ ಎಲ್ಲರ ಮನ ಗೆದ್ದಿರುವ ನವರಸನ್, ಕಳೆದ ಎರಡು ವರ್ಷಗಳ ಹಿಂದೆ ಚಿತ್ರಗಳ ಪ್ರಮೋಷನ್ ಗೆ ಅನುಕೂಲವಾಗುವಂತಹ MMB legacy ಎಂಬ ಸುಸಜ್ಜಿತ ಸಭಾಂಗಣ ಆರಂಭಿಸಿದ್ದರು. ಎರಡು ವರ್ಷಗಳಲ್ಲಿ 300 ರ ಆಸುಪಾಸಿನ ಸಮಾರಂಭಗಳು ಈ ಸ್ಥಳದಲ್ಲಿ ನಡೆದಿದೆ. ಆ ಎಲ್ಲಾ ಕಾರ್ಯಕ್ರಮಗಳು ಚಲನಚಿತ್ರದ ಕುರಿತಾದ ಕಾರ್ಯಕ್ರಮಗಳೇ ಆಗಿರುವುದು ವಿಶೇಷ. ಇತ್ತೀಚಿಗೆ MMB legacy ಯ ದ್ವಿತೀಯ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟರಾದ ಚಂದನ್ ಶೆಟ್ಟಿ, ಶ್ರೇಯಸ್ ಮಂಜು, ನಿರ್ಮಾಪಕರಾದ ಕೃಷ್ಣ ಸಾರ್ಥಕ್, ಗೋವಿಂದರಾಜು, ಚೇತನ್ ಗೌಡ, ರಾಜೇಶ್, ಜಿ.ಟಿ.ಮಾಲ್ ನ ಮಾಲೀಕರಾದ ಆನಂದ್, “ಜಾಲಿವುಡ್” ಸ್ಟುಡಿಯೋಸ್ ನ ಬಶೀರ್ ಹಾಗೂ ಪ್ರಚಾರಕರ್ತರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ, ವಿಜಯ್ ಕುಮಾರ್, ಕಲ್ಲೇಶ್ ಮುಂತಾದವರು ಸಮಾರಂಭದಲ್ಲಿ ಭಾಗವಹಸಿ ನವರಸನ್ ಅವರಿಗೆ ಶುಭ ಕೋರಿದರು.

MMB legacy

ಈ ಸಂದರ್ಭದಲ್ಲಿ ಮಾತನಾಡಿದ ನವರಸನ್, ಕಳೆದ ಕೆಲವು ವರ್ಷಗಳ ಹಿಂದೆ ಚಿತ್ರರಂಗದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಚಲನಚಿತ್ರಗಳ ಕುರಿತಾದ ಸಮಾರಂಭಗಳನ್ನು ನಡೆಸಲು ಸೀಮಿತ ಬಜೆಟ್ ನಲ್ಲಿ ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ‌. ಅದು ನಿರ್ಮಾಪಕರಿಗೆ ಅನುಕೂಲವಾಗುವಂತಹದು ಆಗಿರಬೇಕು ಎಂದರು. ಆ ಕೂಡಲೆ ನಾನು ಈ ವಿಷಯದ ಕುರಿತು ಯೋಚಿಸ ತೊಡಗಿದೆ. ಜಿ.ಟಿ.ಮಾಲ್ ನ ನಾಲ್ಕನೇ ಅಂತಸ್ತಿನಲ್ಲಿ ವಿಶಾಲವಾದ ಸ್ಥಳವಿತ್ತು. ಇದರ ಮಾಲೀಕರಾದ ಆನಂದ್ ಅವರ ಬಳಿ ಈ ವಿಷಯದ ಬಗ್ಗೆ ಮಾತನಾಡಿದೆ. ಅವರು ಜಾಗ ನೀಡಿದರು. ಕೆಲವೇ ತಿಂಗಳಲ್ಲಿ ಚಲನಚಿತ್ರಗಳ ಟೀಸರ್, ಟ್ರೇಲರ್, ಹಾಡು ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸುವಂತಹ ಸುಸಜ್ಜಿತ MMB legacy ಸಭಾಂಗಣ ಸಿದ್ದವಾಯಿತು. ನಿರ್ಮಾಪಕರಿಗೆ ಆರ್ಥಿಕವಾಗಿ ಹೆಚ್ಚು ಹೊರೆ ಆಗದಂತಹ ದರವನ್ನು ನಿಗದಿಪಡಿಸಲಾಯಿತು‌‌. ಎರಡು ವರ್ಷಗಳಲ್ಲಿ ಹತ್ತಿರಹತ್ತಿರ 300 ಸಮಾರಂಭಗಳು ಇಲ್ಲಿ ನಡೆದಿದೆ. ಹಾಗಂತ ಇದರಿಂದ ನನಗೆ ಆರ್ಥಿಕವಾಗಿ ತುಂಬಾ ಲಾಭ ಅಂತ ಇಲ್ಲ. ಕೆಲವೊಮ್ಮೆ ನಾನೇ ಕೈಯಿಂದ ಬಾಡಿಗೆ ಕಟ್ಟಿದ್ದು ಇದೆ. ಆದರೆ ಚಿತ್ರರಂಗಕ್ಕೆ ಅದರಲ್ಲೂ ವಿಶೇಷವಾಗಿ ನಿರ್ಮಾಪಕರಿಗಾಗಿ ಈ ಜಾಗವನ್ನು ಆರಂಭಿಸಿದ್ದೇ‌ನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ. ಇನ್ನೂ ಹೆಚ್ಚಿನ ನಿರ್ಮಾಪಕರು ಈ ಸಭಾಂಗಣದ ಅನುಕೂಲತೆಯನ್ನು ಬಳಸಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಕಲಾವಿದರಿಗೆ, ಚಿತ್ರರಂಗದ ಗಣ್ಯರಿಗೆ, ಪಿ.ಆರ್.ಓ ಗಳಿಗೆ ಹಾಗೂ ಮಾಧ್ಯಮದ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು MMB legacy ಯ ಮುಖ್ಯಸ್ಥ ನವರಸನ್.

MMB legacy

Be the first to comment

Leave a Reply

Your email address will not be published. Required fields are marked *

Translate »
error: Content is protected !!