ಸೀಟ್ ಎಡ್ಜ್

‘ಸೀಟ್ ಎಡ್ಜ್’ ಯಶಸ್ವಿ 25 ದಿನ ಪ್ರದರ್ಶನ

ಯುವನಟ ಸಿದ್ದು ಮೂಲಿಮನಿ ಮತ್ತು ರವೀಕ್ಷಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದ ‘ಸೀಟ್ ಎಡ್ಜ್’ ಚಿತ್ರ ಇದೇ ಜನವರಿ 30ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಿ, ತೆರೆಗೆ ಬಂದಿದ್ದು, ಇದೀಗ ‘ಸೀಟ್ ಎಡ್ಜ್’ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದೆ.

ಹೌದು, ಆರಂಭದಿಂದಲೂ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ‘ಸೀಟ್ ಎಡ್ಜ್’ ಚಿತ್ರ ಇದೇ ಜನವರಿ ಕೊನೆಯ ಶುಕ್ರವಾರ (ಜ. 30) ಅದ್ದೂರಿಯಾಗಿ ತೆರೆಗೆ ಬಂದಿತ್ತು. ಕರ್ನಾಟಕ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಪರದೆಗಳಲ್ಲಿ ‘ಸೀಟ್ ಎಡ್ಜ್’ ಚಿತ್ರ ಏಕಕಾಲದಲ್ಲಿ ತೆರೆ ಕಂಡಿತ್ತು. ಥಿಯೇಟರಿನಲ್ಲಿ ಬಿಡುಗಡೆಯಾದ ಬಳಿಕ ನೋಡುಗರ ಗಮನ ಸೆಳೆಯಲು ಯಶಸ್ವಿಯಾದ ‘ಸೀಟ್ ಎಡ್ಜ್’ ಚಿತ್ರ, ಬಿಡುಗಡೆಯಾದ ಬಹುತೇಕ ಎಲ್ಲಾ ಪರದೆಗಳಲ್ಲೂ ತುಂಬಿದ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ.

ಸೀಟ್ ಎಡ್ಜ್

‘ಸೀಟ್ ಎಡ್ಜ್’ ಯಶಸ್ವಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ಸಿದ್ದು ಮೂಲಿಮನಿ, ‘ನಮ್ಮ ‘ಸೀಟ್ ಎಡ್ಜ್’ ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲಾ ಕಡೆಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ರಾಜ್ಯದ ಎಲ್ಲಾ ಭಾಗಗಳ ಪ್ರೇಕ್ಷಕರಿಗೂ ‘ಸೀಟ್ ಎಡ್ಜ್’ ಇಷ್ಟವಾಗುತ್ತಿದೆ. ಸಿನಿಮಾದಲ್ಲಿನ ಹಾರರ್-ಕಾಮಿಡಿ ಶೈಲಿ ನೋಡುಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರೇಕ್ಷಕರು ಕೊಟ್ಟ ಅಭೂತ ಪೂರ್ವ ಬೆಂಬಲ ಮತ್ತು ಸಹಕಾರದಿಂದ ‘ಸೀಟ್ ಎಡ್ಜ್’ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಲು ಸಾಧ್ಯವಾಗಿದೆ’ ಎಂದಿದ್ದಾರೆ.

ಇನ್ನು ‘ಸೀಟ್ ಎಡ್ಜ್’ ಚಿತ್ರದ ನಾಯಕ ನಟಿ ರವೀಕ್ಷಾ ಶೆಟ್ಟಿ ಕೂಡ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಫುಲ್ ಖುಷಿಯಾಗಿದ್ದಾರೆ. ‘ಸಿನಿಮಾ ನೋಡಿದ ಬಹುತೇಕರು ಟೈಟಲ್ಲಿಗೆ ತಕ್ಕಂತ ಸಿನಿಮಾ ನೋಡುವಾಗ ‘ಸೀಟ್ ಎಡ್ಜ್’ನಲ್ಲಿ ಕೂತಂಥ ಅನುಭವವಾಗಿದೆ ಎಂದಿದ್ದಾರೆ. ಸಿನಿಮಾದ ಕಥೆ, ಹಾಡು, ಡ್ಯಾನ್ಸ್, ಕಾಮಿಡಿ, ಹಾರರ್, ಥ್ರಿಲ್ಲರ್ ಅಂಶಗಳನ್ನು ಆಡಿಯನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಇಂಥದ್ದೊಂದು ಸಿನಿಮಾದ ಪಾತ್ರವಾಗಿರುವುದಕ್ಕೆ ಖುಷಿಯಾಗಿದ್ದೇನೆ’ ಎಂದಿದ್ದಾರೆ.

ನಿರ್ಮಾಪಕ ಗಿರಿಧರ ಟಿ. ವಸಂತಪುರ ಮತ್ತು ನಿರ್ದೇಶಕ ಚೇತನ್ ಶೆಟ್ಟಿ, ‘’ಸೀಟ್ ಎಡ್ಜ್’ ಚಿತ್ರಕ್ಕೆ ಥಿಯೇಟರಿನಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಸ್ಪಂದನೆ ಪ್ರೇಕ್ಷಕರಿಂದ ಸಿಕ್ಕಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ‘ಸೀಟ್ ಎಡ್ಜ್’ನಲ್ಲಿ ಕೂತು ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಜನರಿಗೆ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ಖುಷಿ ನಮಗಿದೆ. ‘ಸೀಟ್ ಎಡ್ಜ್’ ನಮಗೆ ಮರೆಯಲಾಗದ ಅನುಭವ, ನೆನಪುಗಳನ್ನು ಕೊಟ್ಟಿದೆ. ಚಿತ್ರವನ್ನು ಗೆಲ್ಲಿಸಿದ ಕನ್ನಡದ ಎಲ್ಲಾ ಚಿತ್ರಪ್ರೇಮಿಗಳಿಗೆ ಧನ್ಯವಾದಗಳು’ ಎಂದಿದ್ದಾರೆ.

ಸೀಟ್ ಎಡ್ಜ್

ಇನ್ನು ‘ಸೀಟ್ ಎಡ್ಜ್’ ಸಕ್ಸಸ್ ನಿಂದ ಖುಷಿಯಾಗಿರುವ ಚಿತ್ರತಂಡ ಸದ್ದಿಲ್ಲದೆ, ಮತ್ತೊಂದು ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಮತ್ತು ನಿರ್ದೇಶಕರು. ‘ಮನಸ್ಸಿಗೆ ಮುಟ್ಟುವಂಥ ಸಿನಿಮಾಗಳನ್ನು ಮಾಡಿದರೆ, ಖಂಡಿತ ಪ್ರೇಕ್ಷಕರು ವೋಡುತ್ತಾರೆ ಎಂಬ ಭರವಸೆ ನಮಗೆ ‘ಸೀಟ್ ಎಡ್ಜ್’ ಚಿತ್ರದಲ್ಲಿ ಸಿಕ್ಕಿದೆ. ಮುಂದೆ, ಇದೇ ತಂಡದ ಜೊತೆಗೆ ಮತ್ತೊಂದು ಹೊಸ ಸಿನಿಮಾದ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಆ ಸಿನಿಮಾವನ್ನೂ ಘೋಷಣೆ ಮಾಡಲಿದ್ದೇವೆ’ ಎಂದಿದ್ದಾರೆ.

ಚಿತ್ರದ ನಾಯಕ ಸಿದ್ದು ಮೂಲಿಮನಿ, ನಾಯಕಿ ರವೀಕ್ಷಾ ಶೆಟ್ಟಿ ಅವರೊಂದಿಗೆ ‘ಸೀಟ್ ಎಡ್ಜ್’ನ ಇತರ ಪ್ರಮುಖ ಕಲಾವಿದರಾದ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮೀ ಸಿದ್ದಯ್ಯ ಸೇರಿದಂತೆ ಅನೇಕರು ‘ಸೀಟ್ ಎಡ್ಜ್’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ‘ಸೀಟ್ ಎಡ್ಜ್’ ಚಿತ್ರ 25 ದಿನಗಳನ್ನು ಪೂರೈಸಿದ್ದು, ರಾಜ್ಯಾದ್ಯಂತ ಸುಮಾರು 10ಕ್ಕೂ ಹೆಚ್ಚಿನ ಕಡೆಗಳಲ್ಲಿ ನಾಲ್ಕನೇ ವಾರ ಪೂರೈಸಿ ಐದನೇ ವಾರದತ್ತ ಮುನ್ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯನಾಗಬೇಕು ಎಂದು ಘೋಸ್ಟ್ ಹಂಟಿಂಗ್ ಗೆ ಹೊರಟ ವ್ಲಾಗರ್ ಹುಡುಗನೊಬ್ಬ ಏನೇನು ಸಮಸ್ಯೆ ಎದುರಿಸುತ್ತಾನೆ? ಕೊನೆಗೆ ಆ ಸಮಸ್ಯೆಯಿಂದ ಹೊರ ಬರುತ್ತಾನಾ? ಇಲ್ಲವಾ..? ಎಂಬುದರ ಸುತ್ತ ‘ಸೀಟ್ ಎಡ್ಜ್’ ಚಿತ್ರದ ಕಥಾಹಂದರ ಸಾಗುತ್ತದೆ. ಉತ್ತರ ಭಾರತದ ಖ್ಯಾತ ಘೋಸ್ಟ್ ಹಂಟರ್ ಸೌರವ್ ತ್ರಿಪಾಠಿ ಅವರಿಂದ ಪ್ರೇರಣೆಗೊಂಡು ‘ಸೀಟ್ ಎಡ್ಜ್’ ಚಿತ್ರ ಮಾಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!