ಕಮಲ್ ಗೆ ಸುಪ್ರೀಂನಲ್ಲೂ ಮುಖಭಂಗ!

ತಮಿಳು ನಟ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ  ಸಲ್ಲಿಸಿದ ಅರ್ಜಿನ್ನು ತಕ್ಷಣ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾ.ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಮನಮೋಹನ್ ಅವರ ಪೀಠ,  ಕರ್ನಾಟಕ ಥಿಯೇಟರ್ ಅಸೋಸಿಯೇಷನ್,  ಕರ್ನಾಟಕ ಹೈಕೋರ್ಟ್ ನ್ನು ಸಂಪರ್ಕಿಸುವಂತೆ ಕೇಳಿತು.  ತಕ್ಷಣ ವಿಚಾರಣೆಯನ್ನು ನಿರಾಕರಿಸಿದ ನ್ಯಾ. ಪ್ರಶಾಂತ್ ಮಿಶ್ರಾ, ಚಿತ್ರಮಂದಿರಗಳಲ್ಲಿ ಅಗ್ನಿಶಾಮಕ ಯಂತ್ರಗಳನ್ನು ಅಳವಡಿಸಬೇಕು ಎಂದು  ಸೂಚಿಸಿದರು.

ಕನ್ನಡ ಭಾಷೆ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ತಮಿಳು ನಟ ಕಮಲ್ ಹಾಸನ್  ಅವರ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಲಾದ  ಹಿನ್ನೆಲೆಯಲ್ಲಿ ‘ಥಗ್ ಲೈಫ್’ ಚಿತ್ರ ಜೂನ್ 5ರಂದು ಕರ್ನಾಟಕ ಹೊರತುಪಡಿಸಿ ಎಲ್ಲೆಡೆ ಬಿಡುಗಡೆಯಾಯಿತು. ಚಿತ್ರ ಪ್ರದರ್ಶನವನ್ನು ವಿರೋಧಿಸಿ ಕೆಲವು ಗುಂಪುಗಳು ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿವೆ ಎಂದು ಥಿಯೇಟರ್ ಅಸೋಸಿಯೇಷನ್ ​​ಪರವಾಗಿ ಅರ್ಜಿ ಸಲ್ಲಿಸಿದ ವಕೀಲರು ಹೇಳಿದ್ದಾರೆ.

‘ಥಗ್ ಲೈಫ್’  ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್   ಹಲವು ವರ್ಷಗಳ ನಂತರ  ಈ ಚಿತ್ರದಲ್ಲಿ ಮಣಿರತ್ನಂ ಅವರೊಂದಿಗೆ ಕೆಲಸ ಮಾಡಿದ್ದಾರೆ. ಥಗ್ ಲೈಫ್   ಬಿಡುಗಡೆಯಾದ ಮೂರು ದಿನದಲ್ಲಿ 30 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ. 180 ಕೋಟಿ ಬಾರಿ ಬಜೆಟ್ ನ ಚಿತ್ರ  ಹೀನಾಯ ಸೋಲು ಕಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!