ಸತ್ಯಪ್ರಕಾಶ್ ಹೊಸ ಸಿನಿಮಾ ಅನೌನ್ಸ್‌

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದ  ‘ರಾಮಾ ರಾಮಾ ರೇ’ ನಿರ್ದೇಶಕ ಡಿ. ಸತ್ಯಪ್ರಕಾಶ್ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ.

ಡಿ. ಸತ್ಯಪ್ರಕಾಶ್ ಈ ಚಿತ್ರಕ್ಕೆ “ಎಕ್ಸ್ ಅಂಡ್‌ ವೈ” ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ಕೂಡ ಸ್ಪೆಷಲ್ ಆಗಿದ್ದು ರಿಲೀಸ್ ಆಗಿದೆ. 

X & Y ಚಿತ್ರದಲ್ಲಿ ಸತ್ಯ ಪ್ರಕಾಶ್ ಹೀರೋ ಕೂಡ ಆಗಿದ್ದಾರೆ. ತಂಡದ ಸದಸ್ಯರ ಅಭಿಪ್ರಾಯವನ್ನೂ ಪಡೆದುಕೊಂಡ ಬಳಿಕ ಸತ್ಯ ಪ್ರಕಾಶ್ ತಾವೇ ಒಂದು ಪಾತ್ರ ಮಾಡೋಕೆ ರೆಡಿ ಆಗಿದ್ದಾರೆ. ಸತ್ಯ ಪ್ರಕಾಶ್​ ಅವರು ಈ ಹಿಂದೆ ನಿರ್ದೇಶನ ಮಾಡಿದ್ದ ‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’, ‘ಮ್ಯಾನ್​ ಆಫ್​ ದ ಮ್ಯಾಚ್​’ ಸಿನಿಮಾಗಳ ಶೀರ್ಷಿಕೆಗಳು ಭಿನ್ನವಾಗಿದ್ದವು.

ನವಂಬರ್‌ 24ರ ಬೆಳಗಿನ ಜಾವ  ಜಯನಗರದ ತಮ್ಮ ಕಛೇರಿಯಲ್ಲಿ ಸ್ನೇಹಿತರು, ಕಲಾವಿದರು ಹಾಗೂ ತಮ್ಮ ತಂಡದ ತಂತ್ರಜ್ಞರನ್ನೊಳಗೂಡಿ ಸತ್ಯ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾದ ಮುಹೂರ್ತ ಮುಗಿಸಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನದ ಜತೆಗೆ ಸತ್ಯಪ್ರಕಾಶ್‌ ಹಾಗೂ ಅಥರ್ವ ಪ್ರಕಾಶ್‌ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಸಿನಿಮಾಗೆ ಲವಿತ್‌ ಛಾಯಾಗ್ರಹಣ, ವಾಸುಕಿ ವೈಭವ್‌ ಸಂಗೀತ ನಿರ್ದೇಶನ, ಬಿ.ಎಸ್‌ ಕೆಂಪರಾಜು ಅವರ ಸಂಕಲನ ಇದೆ. ವರದರಾಜ್‌ ಕಾಮತ್‌ ಕಲಾನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತ ಮುತ್ತಲ ಪರಿಸರದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಸತ್ಯಪ್ರಕಾಶ್‌ ತಿಳಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!