ಡಾಲಿ ಧನಂಜಯ, ಸತ್ಯದೇವ ಹಾಗೂ ಅಮೃತ ಅಯ್ಯಂಗಾರ್ ಘಟನೆಯ ಸಿನಿಮಾ ನಾಳೆ 4 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಡಾಲಿ ಜೊತೆಗೆ ತೆರೆ ಹಂಚಿಕೊಂಡಿರುವ ಸತ್ಯ ದೇವ್ ಅವರು ಧನಂಜಯ ನನಗೆ ಅಣ್ಣ ಎಂದು ಹೇಳಿಕೊಂಡಿದ್ದಾರೆ.
ಸತ್ಯದೇವ್ ಅವರು ವಿಶಾಖಪಟ್ಟಣದವರು. ಕೆಲ ಕಾಲ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ದುನಿಯಾ ಹಾಗೂ ಹುಡುಗರ ಚಿತ್ರವನ್ನು ನೋಡಿದ್ದೆ ಎಂದು ಅವರು ಹೇಳಿದ್ದಾರೆ.
ಧನಂಜಯ್ ಹಾಗೂ ನನ್ನ ಸಿನಿಮಾ ಪ್ರಯಾಣ ಒಂದೇ ರೀತಿ ಇದೆ. ಏನೋ ಓದಿ, ಎಲ್ಲೋ ಕೆಲಸ ಮಾಡಿ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಈಗ ನಾಯಕರಾಗಿ ನಟಿಸುತ್ತಿದ್ದೇವೆ. ನಾವು ಅಣ್ಣ ತಮ್ಮಂದಿರು ಇದ್ದಂತೆ ಎಂದು ಅವರು ಹೇಳಿದ್ದಾರೆ.
ಈಶ್ವರ್ ಕಾರ್ತಿಕ್ ನಿರ್ದೇಶನದ ಜೀಬ್ರಾ ಚಿತ್ರದಲ್ಲಿ ಸತ್ಯದೇವ ಅವರು ಬ್ಯಾಂಕರ್ ಪಾತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಯಿಂದ ಕೂಡಿದ ಚಿತ್ರ ಇದಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಅಲ್ಲದೆ ತೆಲುಗು, ತಮಿಳು ಭಾಷೆಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
Be the first to comment